ಪ್ರಮುಖ ಸುದ್ದಿ
ಮೋದಿ ಜನುಮ ದಿನಃ ಬಿಜೆಪಿಯಿಂದ ವೃಕ್ಷಾರೋಹಣ

ಮೋದಿ ಜನುಮ ದಿನಃ ಬಿಜೆಪಿಯಿಂದ ವೃಕ್ಷಾರೋಹಣ
ಶಿರಸಿಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71 ನೇ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಬಿಜೆಪಿ ಗ್ರಾಮೀಣ ಮಂಡಲವತಿಯಿಂದ ಸೊಂದಾದ ಶ್ರೀಸ್ವರ್ಣವಲ್ಲಿ ಸಸ್ಯಲೋಕದಲ್ಲಿ 71 ಸಸಿಗಳನ್ನು ನೆಡುವ ಮೂಲಕ ತಮ್ಮ ನೆಚ್ಚಿನ ಪ್ರಧಾನಿಗೆ ಜನ್ಮ ದಿನದ ಶುಭಾಶಯ ಕೋರಿದರು.
ಅಲ್ಲದೆ ಮೋದಿಜೀಯವರ ಹೆಸರಿನಲ್ಲಿ ಅವರ ಆರೋಗ್ಯವೃದ್ಧಿಗಾಗಿ ಆಡಳಿತದ ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ಅಡ್ಡಿ ಆತಂಕ ಬಾರದಿರಲಿ ಎಂದು ಶ್ರೀಮಠದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ನರಸಿಂಹ ಹೆಗಡೆ, ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.