ಪ್ರಮುಖ ಸುದ್ದಿ

ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆಃ ಪಿಎಸ್ಐ, ಕಾಂಟ್ರಾಕ್ಟರ್, ಇಂಜಿನಿಯರ್ ‌ಇ‌ಬ್ಬರ ವಿರುದ್ಧ ದೂರು ದಾಖಲು

ಪಿಎಸ್ಐ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆಃ ಕಾಂಟ್ರಾಕ್ಟರ್, ಇಂಜಿನಿಯರ್ ‌ಇ‌ಬ್ಬರ ವಿರುದ್ಧವೂ ದೂರು

ಯಾದಗಿರಿಃ ಬಾಕಿ ಎರಡು ತಿಂಗಳ ಸಂಬಳ ನೀಡಿ ಜೀವನೋಪಾಯಕ್ಕೆ ಅಗತ್ಯವಿದೆ ಎಂದು ಸಂಬಂಧಪಟ್ಟ ಇಂಜಿನಿಯರ್ ರನ್ನು ಕೇಳಿರುವ‌ ಇಂದೇ ಕಾರಣಕ್ಕೆ ಆತನನ್ನು ಬಾಯಿಗೆ ಬಂದಂತೆ ಬೈಯ್ದುದ್ದಲ್ಲದೆ‌ ಪಿಎಸ್ಐ ಅವರ‌‌ ಗಮನಕ್ಕೆ ತಂದು ಸರ್ಕಾರಿ ಅಧಿಕಾರಿಗಳ‌ ಮೇಲೆ ದರ್ಪ ತೋರುತ್ತಿದ್ದನೆ ಎಂದು ಸುಳ್ಳು ಮಾಹಿತಿ ನೀಡಿ ಪಿಎಸ್ಐ ಅವರಿಂದಲೇ ವ್ಯಕ್ತಿಯೋರ್ವನಿಗೆ ಪೆಟ್ಟು ನೀಡಿಸಿ‌ ಆತನ‌ ಮೇಲೆ ದಬ್ಬಾಳಿಕೆ ನಡೆದಿರುವ‌ ಕಾರಣ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ.

ಬಸಪ್ಪ ಚಲವಾದಿ (31) ಎಂಬ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಪಿಎಸ್ಐ, ಇಬ್ಬರು ಇಂಜಿನೀಯರ್ ಸೇರಿದಂತೆ ಕಾಂಟ್ರಾಕ್ಟರ್ ಕಿರುಕುಳಕ್ಕೆ ಬೇಸತ್ತು ಬಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ರೇಣುಕಾ ಕೆಂಭಾವಿ ಠಾಣೆಗೆ ದೂರು ನೀಡಿದ್ದಾಳೆ.

ದೂರಿನನ್ವಯ ಪಿಎಸ್ಐ, ಕಾಂಟ್ರ್ಯಾಕ್ಟರ್ ಹಾಗೂ ಇಂಜಿನಿಯರ್ ಇಬ್ಬರು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಸಪ್ಪ‌ ಚಲವಾದಿಯವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ವಿನ‌ ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಎಫ್ಐಆರ್ ನಲ್ಲಿ‌ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಲ್ಲದೆ ಗ್ರಾಮದಲ್ಲಿ ಕರೆ ನಿರ್ಮಾಣಕ್ಕೆ ತನ್ನ ಜಮೀನನ್ನೆ ನೀಡಿದ್ದ ಬಸಪ್ಪ, ಅಲ್ಲಿಯೇ ಪಂಪ್ ಆಪರೇಟರ್ ಆಗಿ ಕೆಲಸಕ್ಕೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಆದರೆ ಕಳೆದ ಎರಡು ತಿಂಗಳಿಂದ ವೇತನ ನೀಡದ ಕಾರಣ ಆತ‌ ನೊಂದಿದ್ದ ಮನೆ ನಿರ್ವಹಣೆಗೆ ಹಣ ವಿರದ‌ ಕಾರಣ‌ ವೇತನ ನೀಡಿ ಎಂದು ಪದೇ ಪದೇ ಕೇಳಿದ್ದಾನೆ. ಆತನದೇನು ತಪ್ಪಿಲ್ಲ. ವೇತನ ನೀಡದ‌ ಇಂಜಿಜಿನಯರ್ ರು ಸತಾಯಿಸಿ ಅಲ್ಲದೆ ಪೊಲಿಸ್ ಠಾಣೆಗೆ ಹೇಳಿ ಆತನ‌ನ್ನೆ ಅವಮಾನಿಸಿದ್ದು,‌ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಡಿಎಸ್ಎಸ್ ಮುಖಂಡ ಮಲ್ಲಿಕಾರ್ಜುನ ‌ಕ್ರಾಂತಿ ಆರೋಪಿಸಿದ್ದಾರೆ. ಪೊಲೀಸರು ‌ಪ್ರಕರಣ ದಾಖಲಿಸಿದ್ದು ತನಿಖೆ‌ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button