ಬಸವಭಕ್ತಿವಿನಯ ವಿಶೇಷ

ದಿನ ಭವಿಷ್ಯ ನೋಡಿ ಮುಂದೆ ಹೆಜ್ಜೆ ಹಾಕಿ

ಶ್ರೀ ಗಣಪತಿ ದೇವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಆರ್ದ್ರ
ಋತು : ಗ್ರೀಷ್ಮ
ರಾಹುಕಾಲ 15:38 – 17:15
ಗುಳಿಕ ಕಾಲ 12:26 – 14:02
ಸೂರ್ಯೋದಯ 06:00:05
ಸೂರ್ಯಾಸ್ತ 18:51:26
ತಿಥಿ : ಪ್ರಥಮ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಮನೆಯಲ್ಲಿ ನಡೆಯುವ ಕೆಲವು ತಪ್ಪುಗಳನ್ನು ಮನ್ನಿಸುವ ಕ್ಷಮಾಗುಣ ಬೆಳೆಸಿಕೊಳ್ಳಿ. ಹಣಕಾಸಿನಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ನಂಬಿದಲ್ಲಿ ಮೋಸ ಹೋಗುವ ಪ್ರಮೇಯ ಬರಬಹುದು. ಉದ್ಯೋಗದಲ್ಲಿ ಆತ್ಮತೃಪ್ತಿ ಕಾಣಲಿದ್ದೀರಿ. ನಿಮ್ಮ ಮಾತುಗಾರಿಕೆಯಿಂದ ಕೆಲಸವನ್ನು ಸುಲಭ ಪಡಿಸಿಕೊಳ್ಳಬಹುದು. ವಿನಾಕಾರಣ ಜಿದ್ದಿಗೆ ಬಿದ್ದು ಮೈ ಮೇಲೆ ಚಿಂತೆ ಎಳೆದುಕೊಳ್ಳಬೇಡಿ
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ವೃಷಭ ರಾಶಿ
ಹಣಕಾಸಿನ ವಿಷಯದಲ್ಲಿ ಬಹಳಷ್ಟು ಸಮಸ್ಯೆ ಎದುರಿಸಬಹುದಾದ ಸಾಧ್ಯತೆ ಕಾಣಬಹುದು. ಮಾನಸಿಕ ಖಿನ್ನತೆ ಆವರಿಸಬಹುದು. ಮಕ್ಕಳ ವಿಷಯದಲ್ಲಿ ಚಿಂತೆ ಹೆಚ್ಚಾಗಲಿದೆ. ಹಳೆಯ ವ್ಯಾಜ್ಯಗಳು ಇಂದು ಒಂದು ಹಂತಕ್ಕೆ ಗೆಲುವು ನಿಮ್ಮ ಪಕ್ಷದಲ್ಲಿದೆ. ತಾಳ್ಮೆಯಿಂದ ವ್ಯವಹಾರವನ್ನು ಕುದುರಿಸಿಕೊಳ್ಳಲು ಪ್ರಯತ್ನಿಸಿ. ಹಣಕಾಸನ್ನು ಬೇಕಾಬಿಟ್ಟಿ ದುಂದುವೆಚ್ಚ ಮಾಡುವುದು ಪಶ್ಚಾತ್ತಾಪ ಪಡಬೇಕಾದ ಸಂದರ್ಭ ಬರುತ್ತದೆ. ಮನೋವೇದನೆಯನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಿಥುನ ರಾಶಿ
ನಿಮ್ಮ ವ್ಯವಹಾರವನ್ನು ವೃದ್ಧಿ ಮಾಡಿಕೊಳ್ಳಲು ಪ್ರಯತ್ನಿಸಿ. ಜನಬಲ ಸಂಪಾದಿಸುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿದೆ. ತಯಾರಿಕಾ ಕ್ಷೇತ್ರದಲ್ಲಿ ಆರ್ಥಿಕ ಪ್ರಗತಿ ಕಾಣಬಹುದು. ಸಾಂಪ್ರದಾಯಿಕ ಕಾರ್ಯಗಳಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ನಿಮ್ಮ ಬಾಳ ಸಂಗಾತಿಯ ಹಿತನುಡಿಗಳು ನಿಮ್ಮ ಪ್ರಗತಿದಾಯಕ ಜೀವನಕ್ಕೆ ಬೆಂಬಲವಾಗಿ ಇರಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಮನೆಯ ವಾತಾವರಣವನ್ನು ಶಾಂತ ರೀತಿಯಲ್ಲಿ ಕಾಪಾಡಿಕೊಳ್ಳಲು ಮುಂದಾಗಿ. ಪ್ರೇಮ ವೈಫಲ್ಯದ ಸಮಸ್ಯೆಗಳು ಅನುಭವಿಸುವ ಸಾಧ್ಯತೆ ಇದೆ. ಜ್ಞಾನದ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಉತ್ತಮ ದಿನವಿದು. ಸ್ವಂತ ಜಾಗ ಅಥವಾ ಮನೆ ಖರೀದಿ ಯೋಚನೆಗೆ ವ್ಯವಸ್ಥಿತ ಪ್ರಗತಿ ಕಾಣುವುದು. ಬರುವಂತಹ ಹಣಕಾಸು ನಿರೀಕ್ಷೆಯಂತೆ ಬರಲಿದೆ. ಮಧ್ಯಸ್ತಿಕೆ ಜನಗಳನ್ನು ದೂರದಲ್ಲಿಟ್ಟು ವ್ಯವಹಾರ ಮಾಡಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಕೆಲಸದಲ್ಲಿ ಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಿ. ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ. ಬದಲಾಗುತ್ತಿರುವ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ. ಸಮಾಜದಲ್ಲಿ ನಡೆಯುತ್ತಿರುವ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಲೇವಾದೇವಿಗಾರ ವ್ಯವಹಾರ ಆದಷ್ಟು ತಡೆಗಟ್ಟಿ. ಮೋಸದ ಜಾಲ ಗಳಿಂದ ದೂರವಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಚಿತೆಗೂ ಚಿಂತೆ ಎಂಬಂತೆ ಅದರಲ್ಲಿ ಕಾಲಕಳೆದು ಹೈರಾಣಾಗುವ ಪರಿಸ್ಥಿತಿ ಬರಬಹುದು ಆದಷ್ಟು ನಿಮ್ಮ ಮಾನಸಿಕ ಮತ್ತು ದೈಹಿಕ ಚೈತನ್ಯಕ್ಕೆ ಒತ್ತು ನೀಡಿ. ಕಾರ್ಯಗಳಲ್ಲಿ ಯಶಸ್ವಿಯಾಗಲು ನಿಮ್ಮಲ್ಲಿನ ಅಲಕ್ಷತನವನ್ನು ತೆಗೆದುಹಾಕಿ. ನಿಮ್ಮ ವ್ಯವಹಾರದ ನಿಮಿತ್ತ ಮತ್ತು ಹಣಕಾಸಿನ ವಿಷಯದ ಬಗ್ಗೆ ಕುಟುಂಬದೊಡನೆ ಚರ್ಚಿಸಿ ನಿರ್ಧಾರ ಮಾಡಿಕೊಳ್ಳಿ. ಕೆಲಸದಲ್ಲಿ ವಿಳಂಬತೆ ಹೆಚ್ಚಾಗಬಹುದು ಇದರಿಂದ ಸಂಕಷ್ಟ ಸಹ ಹೆಚ್ಚಾಗಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ತುಲಾ ರಾಶಿ
ಆರ್ಥಿಕವಾಗಿ ಮತ್ತು ವ್ಯವಹಾರದ ರೂಪದಲ್ಲಿ ಉತ್ತಮ ವಹಿವಾಟು ನಡೆಸುವ ಸಾಧ್ಯತೆ ಕಾಣಬಹುದು. ಅವಕಾಶಗಳ ಸುರಿಮಳೆ ಆಗಲಿದೆ. ದಂಪತಿಗಳಲ್ಲಿ ವೈಮನಸ್ಸು ಹೆಚ್ಚಾಗುವ ಸಾಧ್ಯತೆ ಉಂಟು, ನಿಮ್ಮಲ್ಲಿನ ಮಾತಿನ ದಾಟಿ ಇನ್ನೊಬ್ಬರ ಮನಸ್ಸನ್ನು ನೋಯಿಸ ಬಹುದು ಆದಕಾರಣ ಶಾಂತರೀತಿಯಿಂದ ವರ್ತಿಸಿ. ಸಾಲ ವಸೂಲಿ ಮಾಡಲು ಹರಸಾಹಸ ಪಡುವಿರಿ. ಮಕ್ಕಳ ಬೆಳವಣಿಗೆ ಹಾಗೂ ಅವರ ಕಾರ್ಯಗಳನ್ನು ಗಮನಿಸುವುದು ಒಳ್ಳೆಯದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ವೃಚ್ಚಿಕ ರಾಶಿ
ಹಸನ್ಮುಖಿ ವ್ಯಕ್ತಿತ್ವದಿಂದ ಪ್ರಜ್ವಲಿಸುವಿರಿ. ಕೆಲಸದಲ್ಲಿ ಉತ್ತಮವಾಗಿ ಪಾಲ್ಗೊಳ್ಳುತ್ತೀರಿ. ನಿಮ್ಮ ನಿರ್ಧಾರಗಳು ವ್ಯವಸ್ಥಿತ ಲಾಭವನ್ನು ತಂದು ಕೊಡಲಿದೆ. ಕುಟುಂಬದೊಡನೆ ಗೃಹಪಯೋಗಿ ವಸ್ತುಗಳ ಖರೀದಿ ಸಾಧ್ಯತೆ. ಗೃಹ ನಿರ್ಮಾಣ ಕಾರ್ಯಗಳು ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ಆರ್ಥಿಕವಾಗಿ ನೀವು ಸಿದ್ದ ಪಡಿಸಿಕೊಂಡಿರುವ ಯೋಜನೆಯು ಉತ್ತಮವಾಗಿದೆ. ಕೆಲವರ ಅಪಹಾಸ್ಯ ಅಥವಾ ಅಪಪ್ರಚಾರಕ್ಕೆ ಕಿವಿಗೊಡಬೇಡಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ವಸ್ತುಸ್ಥಿತಿ ಮತ್ತು ವಿಷಯದ ಮನವರಿಕೆ ನಿಮ್ಮ ಮನಸ್ಸಿನಲ್ಲಿ ಹೆಚ್ಚು ಕಾಡಲಿದೆ. ನಿಮ್ಮ ವ್ಯವಹಾರದ ಚಾಕಚಕ್ಯತೆಯಿಂದ ಉತ್ತಮ ಅವಕಾಶಗಳನ್ನು ಪಡೆಯುವಿರಿ. ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳವಣಿಗೆ ಕಾಣಬಹುದು. ಇಂದು ಬರುವ ಶುಭಸುದ್ದಿ ನಿಮ್ಮನ್ನು ಚೈತನ್ಯದಿಂದ ಇರಿಸುತ್ತದೆ. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಹೂಡಿಕೆಗಳ ಬಗ್ಗೆ ಗಮನವಹಿಸಿ, ಹಾಗೂ ನಿಪುಣರ ಸಹಾಯ ಪಡೆಯಿರಿ. ಆರೋಗ್ಯದ ದೃಷ್ಟಿಯಿಂದ ನೀವು ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ. ವಿರೋಧಿ ವರ್ಗಗಳಿಂದ ಅಡೆತಡೆಗಳು ಕೆಲಸದಲ್ಲಿ ಇಂದು ಹೆಚ್ಚು ಆಗಲಿದೆ. ಧಾರ್ಮಿಕ ವಿಧಿ-ವಿಧಾನಗಳು ಅಥವಾ ದೇಗುಲ ದರ್ಶನ ಭಾಗ್ಯ ನಿಮಗೆ ಸಿಗಲಿದೆ. ಉತ್ತಮರ ಸಂಘ ಮಾಡಲು ಪ್ರಯತ್ನಿಸಿ. ಹಿರಿಯರ ಮಾತಿಗೆ ಬೆಲೆ ನೀಡುವುದು ಒಳ್ಳೆಯದು. ವ್ಯವಹಾರದಲ್ಲಿ ಪ್ರೌಢತೆಯನ್ನು ಪ್ರದರ್ಶಿಸಿ.
ಶುಭಸಂಜೆ 8
ಗಿರಿಧರ ಶರ್ಮ 9945098262

ಕುಂಭ ರಾಶಿ
ಬಾಳಿನ ಪ್ರಯಾಣದಲ್ಲಿ ಕಷ್ಟನಷ್ಟಗಳು ಸಹಜ ಅಂದುಕೊಂಡಿರುವ ಕೆಲಸ ಆಗುತ್ತದೆ ಎಂಬ ಭರವಸೆಯಿಂದ ಮುನ್ನಡೆಯಿರಿ. ನಿಮ್ಮ ಯೋಜನೆಯನ್ನು ಆದಷ್ಟು ಗೋಪ್ಯತೆಯಿಂದ ಕಾಪಾಡಿಕೊಳ್ಳಿ. ದಿಡೀರನೆ ಬಂದು ವರ್ಗದವರ ಆಗಮನ ಆಗಲಿದೆ. ಇಂದು ಹಣಕಾಸಿನಲ್ಲಿ ಖರ್ಚುಗಳು ವಿಪರೀತ ಆಗಬಹುದು. ಮಕ್ಕಳ ಜ್ಞಾನ ಮಟ್ಟ ಉತ್ತಮವಾಗಿದ್ದು ಇವರ ಸಾಧನೆಯ ಬಗ್ಗೆ ನಿಮ್ಮ ಮನದಲ್ಲಿ ಹೆಮ್ಮೆ ಮೂಡುತ್ತದೆ. ಸಂಗಾತಿಯ ಕೋಪವನ್ನು ಕಡಿಮೆ ಮಾಡಲು ಹೆಚ್ಚಿನ ಪ್ರೀತಿ ತೋರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮೀನ ರಾಶಿ
ನಿಮ್ಮ ಮನಃಸ್ಥಿತಿಯನ್ನು ವಿಶಾಲವಾಗಿ ಗುರುತಿಸಿಕೊಳ್ಳಿ. ಜೀವನದ ಬೆಳವಣಿಗೆ ಬೇಕಾಗಿರುವ ಸಂಪನ್ಮೂಲವನ್ನು ಕ್ರೂಢಿಕರಿಸಿ. ಮಾಡುವ ಕೆಲಸದಲ್ಲಿ ಸುಧಾರಣೆಗೆ ಒತ್ತು ನೀಡಿ. ಲೇವಾದೇವಿ ವ್ಯವಹಾರ ನಿಮಗೆ ಮಾನಸಿಕ ಚಿಂತೆ ತಂದುಕೊಡಬಹುದು. ಜಮೀನು, ಜಾಗದ ಕ್ರಯವಿಕ್ರಯ ತುಂಬಾ ಸಲೀಸಾಗಿ ನಡೆಯಲಿದೆ. ವ್ಯವಹಾರಸ್ಥರಿಗೆ ಹಣಕಾಸಿನ ನಿರೀಕ್ಷೆ ಉತ್ತಮವಾಗಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button