ಕ್ಯಾಂಪಸ್ ಕಲರವಪ್ರಮುಖ ಸುದ್ದಿ
ಚಂದ್ರನ ಮೇಲ್ಭಾಗದಿಂದ ಫೋಟೋ ಕ್ಲಿಕ್ಕಿಸಿದ ಚಂದ್ರಯಾನ-2 ನೌಕೆ!
ನವದೆಹಲಿ : ಚಂದ್ರನಂಗಳ ಪ್ರವೇಶಿಸಿರುವ ಚಂದ್ರಯಾನ-2 ನೌಕೆ ತೆಗೆದಿರುವ ಚಂದ್ರನ ಮೊಟ್ಟ ಮೊದಲ ಸುಂದರ ಚಿತ್ರವನ್ನು ಇಸ್ರೋ ಇಂದು ಟ್ವಿಟರ್ನಲ್ಲಿ ಶೇರ್ ಮಾಡಿದೆ. ನಿನ್ನೆಯಷ್ಟೇ ಚಂದ್ರಯಾನ-2 ನೌಕೆ ಚಂದ್ರನ ಮೇಲ್ಭಾಗದ 2,650 ಕಿಲೋ ಮೀಟರ್ ಮೇಲಿನಿಂದ ಚಂದಾಮಾಮನ ಅದ್ಭುತವಾದ ಚಿತ್ರ ಕ್ಲಿಕ್ಕಿಸಿದೆ. ಚಂದ್ರನ ಮೇಲಿನ ಎರಡು ಹೆಗ್ಗುರುತುಗಳಾದ ‘ಅಪೋಲೊ ಕುಳಿ’ ಮತ್ತು ಬಟ್ಟಲಿನಾಕಾರದ ಇನ್ನೊಂದು ಕುಳಿ ‘ಮೇರ್ ಓರಿಯಂಟೇಲ್’ನ್ನು ಚಿತ್ರದಲ್ಲಿ ತೋರಿಸಲಾಗಿದೆ.