ಶಹಾಪುರಃ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು
ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು
ಶಹಾಪುರಃ ಕೊರೊನಾ ಹಾವಳಿ ಹಿನ್ನೆಲೆ ರಂಜಾನ್ ಹಬ್ಬದಂಗವಾಗಿ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಅಲ್ಹಾನಿಗೆ ಪ್ರಾರ್ಥನೆ ಸಲ್ಲಿಸಿದರು. ಕೋವಿಡ್ ಮಾರ್ಗಸೂಚಿ ಅನ್ವಯ ಈ ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದ ಕಾರಣ, ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಹಬ್ಬವನ್ನು ಆಚರಿಸಿರುವದು ಕಂಡು ಬಂದಿತು.
ಅಲ್ಲದೆ ಹಬ್ಬದಂಗವಾಗಿ ಪರಸ್ಪರರು ಆಲಿಂಗನ ಶುಭಾಶಯದಿಂದ ಸಹ ದೂರ ಉಳಿದರು. ಮತ್ತು ಆತ್ಮೀಯರು, ಸ್ನೇಹಿತರು ಹಾಗೂ ನೆರೆಹೊರೆಯವರನ್ನು ರಂಜಾನ್ ಅಂಗವಾಗಿ ಮನೆಗೆ ಕರೆದು ಊಟ ಮಾಡಿಸುತ್ತಿದ್ದರು, ಈ ಬಾರ ಕೊರೊನಾ ಹಿನ್ನೆಲೆ ಅದರಿಂದಲೂ ದೂರ ಉಳಿಯುವಂತಾಯಿತು ಎಂದು ಸಮುದಾಯದ ಹಿರಿಯರು ತಿಳಿಸಿದರು.
ಕೊರೊನಾ ಹಿನ್ನೆಲೆ ಹಬ್ಬವನ್ನು ಸರಳವಾಗಿ ಆಚರಿಸಿದ್ದೇವೆ. ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಗಿದೆ. ಅಲ್ಲದೆ ಆತ್ಮೀಯ ಹಿಂದೂ ಬಾಂಧವರನ್ನು ಕರೆದು ಪರಸ್ಪರರು ಹಬ್ಬದ ಶುಭಾಶಯ ಹಂಚಿಕೊಂಡು ಊಟ ಮಾಡಿಸುತ್ತಿದ್ದೇವು. ಕೊರೊನಾ ಹಿನ್ನೆಲೆ ಅದಕ್ಕೂ ಬ್ರೇಕ್ ಬಿದ್ದಂತಾಗಿದೆ. ಕೂಡಲೆ ಅಲ್ಹಾ ಕೊರೊನಾವನ್ನು ಇಡಿ ಜಗತ್ತಿನಿಂದ ನಿರ್ಮೂಲನೆ ಮಾಡಲಿ ಎಂದು ಸರ್ವ ಮುಸ್ಲಿಂ ಸಮುದಾಯ ಪ್ರಾರ್ಥನೆ ಸಲ್ಲಿಸಿದ್ದೇವೆ.
-ಶಕೀಲ್ ಮುಲ್ಲಾ. ಕೃಷ್ಣಾ ಕಾಡಾ ಅಧ್ಯಕ್ಷರ ಆಪ್ತ ಸಹಾಯಕ. ಶಹಾಪುರ.