ಪ್ರಮುಖ ಸುದ್ದಿ

ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿಯೇ ಮೊದಲು ಜಾರಿ

ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿಯೇ ಮೊದಲು ಜಾರಿ

ಬೆಂಗಳೂರಃ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ತರಲಾಗುತ್ತಿದ್ದು. ರಾಷ್ಟ್ರದಲ್ಲಿಯೇ ಮೊದಲು ರಾಷ್ಟ್ರೀಯ ‌ಶಿಕ್ಷಣ ನೀತಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಡಾ.ಸಿ.ಎನ್.ಅಶ್ವಥ್ ನಾರಾಯಣ‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈಗಾಗಲೇ ಪ್ರಸಕ್ತ ಸಾಲಿನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಉನ್ನತ ಶಿಕ್ಷಣ ಪರಿಷತ್ ಎಲ್ಲಾ ವಿಶ್ವ ವಿದ್ಯಾಲಯಗಳಿಗೆ ನಿರ್ದೇಶನ ‌ನೀಡಿದ್ದು,

ಪ್ರಸಕ್ತ ಸಾಲಿನಿಂದಲೇ ನಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಆದೇಶ ನೀಡಲಾಗಿದೆ.

ಕೊರೊನಾ ಭೀತಿ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಅಪಸ್ವರ
ಕೊರೊನಾ ಮಹಾಮಾರಿ ಆರ್ಭಟ ನಡುವೆ ಶಾಲಾ ಕಾಲೇಜುಗಳೇ ಶುರುವಾಗಿಲ್ಲ. ಈ‌ ಮಧ್ಯೆ ಹೊಸ‌ ಶಿಕ್ಷಣ ನೀತಿ‌ಗೆ ಬೇಕಾಗುವ ಸಕಲ ವ್ಯವಸ್ಥೆ ಮಾಡಿಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿರುವದು ಆತುರದ ನಿರ್ಧಾರ ಸರಿಯಲ್ಲ ಎಂದು ವಿಪಕ್ಷ ಅಪಸ್ವರ ಎತ್ತಿದೆ.

ಕೊರೊನಾ ತೀವ್ರತೆ ಹಿನ್ನೆಲೆ‌ ಮತ್ತೆ ಲಾಕ್ ಡೌನ್ ಗೊಳಿಸುವ ಮುನ್ಸೂಚನೆಯನ್ನು‌ ತಜ್ಞರು ನೀಡಿದ್ದು,‌ಇಂತಹ ಸಮಯದಲ್ಲಿ‌ ಆತುರದಲ್ಲಿ ಯಾವುದೇ ಪೂರ್ವತಯಾರಿ ಇಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ‌ ಜಾರಿಗೆ ತರುವದು ಅಗತ್ಯವಿಲ್ಲ‌ ಎಂದು ಹಲವು ವಿಪಕ್ಷ‌ ನಾಯಕರಿಂದ ವಿರೋಧ ವ್ಯಕ್ತವಾಗಿದೆ.

ವಿಷಯ ಆಯ್ಕೆಗೆ ಮುಕ್ತ ಅವಕಾಶ
ನೂತನ ಶಿಕ್ಷಣ ನೀತಿ ಪ್ರಕಾರ ನೂತನ ಪದವಿ ನಾಲ್ಕು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಮೊದಲ ವರ್ಷ ಕಲಿತು ಪದವಿ ಬಿಟ್ಟವರಿಗೆ ಸರ್ಟಿಫಿಕೇಟ್ ಕೋರ್ಸ್ ಎಂದು ಪರಿಗಣಿಸಲಾಗುತ್ತದೆ. ಎರಡನೇ ವರ್ಷದ ಪದವಿ ಮುಗಿಸಿದವರಿಗೆ ಡಿಪ್ಲೋಮಾ ಪದವಿ ಎಂದು ಸರ್ಟಿಫಿಕೇಟ್ ನೀಡಲಾಗುತ್ತದೆ. ಮೂರನೇ ವರ್ಷ ಓದಿದವರಿಗೆ ಪದವಿ, ನಾಲ್ಕನೇ ವರ್ಷ ಅಧ್ಯಯನ ಮಾಡಿದವರಿಗೆ ಆನರ್ಸ್ ಎಂದು ಪರಿಗಣಿಸಿ ಅಂಕಪಟ್ಟಿ ನೀಡಲಾಗುತ್ತದೆ.

ವಿಶೇಷ ಎಂದರೆ ಬಿಎ ಪದವಿಗೆ ವಿಷಯ ಆಯ್ಕೆ ಮಾಡಿಕೊಂಡು ಎರಡು ವರ್ಷ ಓದಿದ ಬಳಿಕ ವಾಣಿಜ್ಯ, ವಿಜ್ಞಾನ ವಿಷಯವನ್ನು ಕೂಡ ಅಯ್ಕೆ ಮಾಡಿಕೊಳ್ಳಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಲಾ ವಿಭಾಗ ಓದಿದವರು ವಿಜ್ಞಾನ ಆಯ್ಕೆಗೂ ಅವಕಾಶ ನೀಡಿರುವುದು ವಿಶೇಷ.

ಇದರಿಂದ ಕಲಾ ವಿಭಾಗದವರು ವಿಜ್ಞಾನ ಆಯ್ಕೆಗೆ, ವಿಜ್ಞಾನ ಓದುತ್ತಿರುವರು ಕಲಾ ವಿಭಾಗ ಆಯ್ಕೆಗೂ ಅವಕಾಶ ನೀಡಿರುವುದು ಹೊಸ ಶಿಕ್ಷಣ ನೀತಿ ವಿಶೇಷ. ಒಂದು ವಿಷಯ ಆಯ್ಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇದರಿಂದ ಭಾರತೀಯ ನಾಗರಿಕ ಸೇವೆ, ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆ ತೆಗೆದುಕೊಳ್ಳುವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button