ರಸ್ತೆ ಸುರಕ್ಷತಾ ಸಪ್ತಾಹಃ ಪೊಲೀಸರಿಂದ ಹೆಲ್ಮೆಟ್ ಧರಿಸಿ ಬೈಕ್ ಜಾಥಾ
ರಸ್ತೆ ಸುರಕ್ಷತಾ ಸಪ್ತಾಹಃ ಪೊಲೀಸರಿಂದ ಹೆಲ್ಮೆಟ್ ಧರಿಸಿ ಬೈಕ್ ಜಾಥಾ
ಶಹಾಪುರಃ ಅಪಘಾತಗಳು ಜಾಸ್ತಿಯಾಗುತ್ತಿದ್ದು, ಪ್ರಾಣ ಹಾನಿಗೆ ಹೆಲ್ಮೆಟ್ ಧರಿಸದಿರುವದು ಮುಖ್ಯ ಕಾರಣವಾಗಿದೆ. ಪ್ರತಿಯೊಬ್ಬರು ನಿರ್ಲಕ್ಷವಹಿಸದೆ ಹೆಲ್ಮೆಟ್ ಧರಿಸಿ ಬೈಕ್ ನಡೆಸಬೇಕು ಎಂದು ನಗರ ಠಾಣೆ ಪಿಐ ಚನ್ನಯ್ಯ ಹಿರೇಮಠ ತಿಳಿಸಿದರು.
ನಗರದಲ್ಲಿ ಇಂದು ‘ರಸ್ತೆ ಸುರಕ್ಷತಾ ಸಪ್ತಾಹ’ ಅಂಗವಾಗಿ ಪೊಲೀಸರು ಹಮ್ಮಿಕೊಂಡ ಹೆಲ್ಮೆಟ್ ಧರಿಸಿ ಜಾಗೃತಿ ಜಾಥಾಗೆ ಅವರು ಚಾಲನೆ ನೀಡಿ ಮಾತನಾಡಿದರು.
ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಬೈಕ್ ಓಡಿಸಬೇಕು. ಕಾನೂನು ಮೀರಿ ನಡೆದುಕೊಳ್ಳಬಾರದು. ಇದು ತಮ್ಮ ಜೀವ ರಕ್ಷಣೆಗಾಗಿಯೇ ಹೆಲ್ಮೆಟ್ ಧರಿಸಲು ಕಾನೂನು ಅನುಷ್ಠಾನ ಮಾಡಿದ್ದು, ಪ್ರತಿಯೊಬ್ಬರು ಇದನ್ನು ಅರಿತು ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಪೊಲೀಸರು ಹೆಲ್ಮೆಟ್ ಧರಿಸಿ ನಗರದ ಠಾಣೆಯಿಂದ ಮೋಚಿ ಗಡ್ಡಾ, ಗಾಂಧಿಚೌಕ್, ದಿಗ್ಗಿಬೇಸ್, ಸಿಬಿ ಕಮಾನ್ ಮೂಲಕ ಬಸವೇಶ್ವರ ವೃತ್ತದಿಂದ ಆಸರ್ ಮೊಹಲ್ಲಾ ವಾಪಸ್ ನಗರ ಠಾಣೆ ಜಾಥಾ ತಲುಪಿತು. ಈ ಸಂದರ್ಭದಲ್ಲಿ ಪಿಎಸ್ ಐ ಚಂದ್ರಕಾಂತ ಮೆಕಾಲೆ, ಕಾನ್ಸಟೇಬಲ್ ಸಿಬ್ಬಂದಿ ಭಾಗವಹಿಸಿದ್ದರು.