ಶಹಾಪುರಃ ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ತೋಡಿದ್ದ ಗುಂಡಿಯಲ್ಲಿ ಬಿದ್ದು ಬಾಲಕ ಸಾವು
ಡಿಪೋ ವ್ಯವಸ್ಥಾಪಕರ ನಿರ್ಲಕ್ಷವೇ ಘಟನೆಗೆ ಕಾರಣಃ ಆರೋಪ
ಡಿಪೋ ವ್ಯವಸ್ಥಾಪಕರ ನಿರ್ಲಕ್ಷವೇ ಘಟನೆಗೆ ಕಾರಣಃ ಆರೋಪ
yadgiri, ಶಹಾಪುರಃ ನಗರದ ಹೊಸ ಬಸ್ ನಿಲ್ದಾಣ ಆವರಣದಲ್ಲಿ ಶೌಚಾಲಯ ಸೆಫ್ಟಿಕ್ ಟ್ಯಾಂಕ್ ನಿರ್ಮಾಣಕ್ಕಾಗಿ ತೋಡಿಸಿದ್ದ ಗುಂಡಿಯಲ್ಲಿ 10 ವರ್ಷದ ಬಾಲಕನೋರ್ವ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಬಸ್ ಡಿಪೋ ಹಿಂಬದಿ ಇರುವ ಆಶ್ರಯ ಕಾಲೊನಿಯ ನಿವಾಸಿ ಹಣಮಂತ ನರಸಪ್ಪ ಶಿಳ್ಳೆಕ್ಯಾತಿ (10) ಮೃತ ಬಾಲಕನಾಗಿದ್ದಾನೆ. ಸಂಬಂಧಿಯೊಬ್ಬರು ಊರಿಂದ ಬರುವ ಸುದ್ದಿ ತಿಳಿದು ಬಸ್ ನಿಲ್ದಾಣಕ್ಕೆ ಹೋಗಿದ್ದಾಗ, ಮಾರ್ಗ ಮಧ್ಯ ಈ ತಗ್ಗಿನಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಬಾಲಕನ ಕುಟುಂಬಸ್ಥರು ಘಟನೆಗೆ ಡಿಪೋ ವ್ಯವಸ್ಥಾಪಕರು ಮತ್ತು ಶೌಚಾಲಯ ನಿರ್ಮಾಣದ ಗುತ್ತಿಗೆದಾರರೇ ಕಾರಣ ಎಂದು ಆರೋಪಿಸಿದ್ದಾರೆ. ಬಸ್ ನಿಲ್ದಾಣದ ಶೌಚಾಲಯ ಸೆಫ್ಟಿಕ್ ಟ್ಯಾಂಕ್ ತುಂಬಿದ್ದು, ಅದನ್ನು ಕ್ಲೀಯರ್ ಮಾಡಿಸದೆ, ಓಪನ್ ಆಗಿ ಶೌಚಾಳಯದ ನೀರನ್ನು ಹೊಲಸನ್ನು ಈ ತೋಡಿಸಿದ ತಗ್ಗು ಗುಂಡಿಗೆ ಬಿಡುತ್ತಿದ್ದರು. ಸಾಕಷ್ಟು ಬಾರಿ ಆಶ್ರಯ ಕಾಲೊನಿ ನಿವಾಸಿಗಳು ಈ ಕುರಿತು ಗಬ್ಬು ವಾಸನೆ ಬರುತ್ತಿದೆ ಎಂದು ಕೇಳಿದರೂ ಇದನ್ನು ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಹೊಲಸು ಗುಂಡಿಗೆ ಮಗು ಬಲಿಯಾಗಿದೆ ಎಂದು ಬಡಾವಣೆ ನಾಗರಿಕರು ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತರಕ್ಷಣಾ ಸಂಘ ಆರೋಪಿಸಿದ್ದು, ಡಿಪೋ ವ್ಯವಸ್ಥಾಪಕ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೆ ನಗರದ ಬಸವೇಶ್ವರ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘ ಪ್ರತಿಭಟನೆ ನಡೆಸಿ ಮೃತ ಬಾಲಕನ ಕುಟುಂಬಕ್ಕೆ 25 ಲಕ್ಷ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಸಾರಿಗೆ ಸಂಸ್ಥೆ ಮತ್ತು ಗುತ್ತಿಗೆದಾರರ ವಿರುದ್ಧ ನಿರಂತರ ಪ್ರತಿಭಟನೆ ನಡೆಸಲಾಗುವದು ಎಂದು ಬಸವರಾಜ, ರಾಜೂ ರೇವಲ್ ಎಚ್ಚರಿಸಿದ್ದಾರೆ.
ನಿರ್ಲಕ್ಷವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಒತ್ತಾಯ
ಸ್ವಚ್ಛ ಭಾರತ ಹೆಸರಿನಲ್ಲಿ ಸರ್ಕಾರ ಎಲ್ಲ ಕಡೆ ಸ್ವಚ್ಛತೆ ಇರಲಿ ಎಂಬ ಸದುದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಹತ್ತಾರು ಕಾರ್ಯಕ್ರಮಗಳು ಅನುಷ್ಠಾನಗೊಳಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳೇ ಸಾರ್ವಜನಿಕ ಸ್ಥಳದಲ್ಲಿ ಸೆಫ್ಟಿಕ್ ಟ್ಯಾಂಕ್ ಖಾಲಿ ಮಾಡಿಸುವದು ಬಿಟ್ಟು, ಅನಧೀಕೃತವಾಗಿ ತಗ್ಗು ಗುಂಡಿ ತೋಡಿಸಿ ಹೊಲಸು ನೀರು ಅದಕ್ಕೆ ಬಿಡುವದು ಎಷ್ಟು ಸಮಜಂಸ.
ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ. ಇದರಿಂದ ಬಾಲಕ ಮೃತ ಪಟ್ಟಂತಾಗಿದೆ. ನಿರ್ಲಕ್ಷವಹಿಸಿದ್ದ ಅಧಿಕಾರಿಗಳ ನಿಷ್ಕಾಳಜಿಗೆ ಬಾಲಕ ಬಲಿಯಾಗಿದ್ದಾನೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ತಹಸೀಲ್ದಾರರ ಮೂಲಕ ಸಾರಿಗೆ ಸಚಿವರಿಗೆ ಕಲ್ಯಾಣ ಕರ್ನಾಟಕ ಕಾರ್ಮಿಕ ರಕ್ಷಣ ಸಂಘ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಮೌನೇಶ ಸುರಪುರ, ಗುರು, ಧರ್ಮಣ್ಣ ಗೌಡ, ಚೌಡಪ್ಪ, ಅರ್ಜುನ ಸೇರಿದಂತೆ ಇತರರಿದ್ದರು.
ಬಾಲಕನ ಸಾವಿಗೆ ಡಿಪೋ ವ್ಯವಸ್ಥಾಪಕ ಹಾಗೂ ಶೌಚಾಲಯ ನಿರ್ಮಾಣ ಗುತ್ತಿಗೆದಾರರು ಕಾರಣರಾಗಿದ್ದಾರೆ, ಸಾಕಷ್ಟು ಬಾರಿ ಮನವಿ ಮಾಡಿದರೂ ನಿರ್ಲಕ್ಷವಹಿಸಿದ್ದು, ಇಂದು ಬಾಲಕ ಸಾವಿಗೆ ಕಾರಣವಾಗಿದೆ. ಮೃತ ಬಾಲಕ ಕುಟುಂಬಕ್ಕೆ 25 ಲಕ್ಷ ಪರಿಹಾರ ಧನ ವಿತರಿಸಬೇಕು.
-ಪಾಂಡು ಶಿಳ್ಳೆಕ್ಯಾತಿ, ಅಲೆಮಾರಿ ಸಂಘದ ಅಧ್ಯಕ್ಷ. ಶಹಾಪುರ,