ಪ್ರಮುಖ ಸುದ್ದಿ
ಅಪರಿಚಿತ ವ್ಯಕ್ತಿಗೆ ವಾಹನ ಡಿಕ್ಕಿ ಸ್ಥಳದಲ್ಲಿಯೇ ಸಾವು
ಅಪರಿಚಿತ ವ್ಯಕ್ತಿಗೆ ವಾಹನ ಡಿಕ್ಕಿ ಸ್ಥಳದಲ್ಲಿಯೇ ಸಾವು
ಯಾದಗಿರಿಃ ಅಪರಿಚಿತ ವಾಹನವೊಂದು ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊಸ ಬಸ್ ನಿಲ್ದಾಣ ಸಮೀಪ ಚಿರಂಜೀವಿ ಶಾಲೆಯ ಬಳಿ ಬೆಳಗ್ಗೆ 9-30 ರ ಸುಮಾರಿಗೆ ನಡೆದಿದೆ. ಮೃತ ವ್ಯಕ್ತಿಯ ವಯಸ್ಸು ಅಂದಾಜು 58 ರಿಂದ 60 ರ ಆಸುಪಾಸಿನಲ್ಲಿದೆ.
ಮೃತ ವ್ಯಕ್ತಿ ಗುರುತು ಪತ್ತೆಯಾಗಿರುವದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿ ಗುರುತು ಪತ್ತೆ ಮಾಡಲಾಗುತ್ತಿದೆ. ಅಲ್ಲದೆ ಡಿಕ್ಕಿ ಹೊಡೆದ ವಾಹನದ ಪತ್ತೆಗೂ ಪೊಲಿಸರು ತೀವ್ರ ಶೋಧ ನಡೆಸಿದ್ದಾರೆ.
ಮೃತ ವ್ಯಕ್ತಿ ನೀಲಿ ಬಣ್ಣದ ಶರ್ಟ್, ಬ್ಲಾಕ್ ಪ್ಯಾಂಟ್ ಧರಿಸಿದ್ದಾನೆ.