ಪ್ರಮುಖ ಸುದ್ದಿ

ವಿದ್ಯುತ್ ಅವಘಡಃ ಮೃತ ಇಮಾಮಸಾಬ ಮನೆಗೆ ದರ್ಶನಾಪುರ ಭೇಟಿ‌, ಕುಟುಂಬಸ್ಥರಿಗೆ ಧನಸಹಾಯ

ವಿದ್ಯುತ್ ಅವಘಡಃ ಮೃತ ಇಮಾಮಸಾಬ ಮನೆಗೆ ದರ್ಶನಾಪುರ ಭೇಟಿ‌, ಕುಟುಂಬಸ್ಥರಿಗೆ ಧನಸಹಾಯ

ಶಹಾಪುರಃ ವಿದ್ಯುತ್ ಅವಘಡದಿಂದಾಗಿ ಜೀವ ಕಳೆದುಕೊಂಡ ಗ್ರಾಮ ಪಂಚಾಯತ ಕರವಸೂಲಿಗಾರ ಇಮಾಮ್ ಸಾಬ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಾಂತ್ವಾನ ಹೇಳಿದರು.

ತಾಲೂಕಿನ ಬೂದನೂರ ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, ಕರವಸೂಲಿಗಾರ ಇಮಾಮ್ ಸಾಬ ವಿದ್ಯುತ್ ಸ್ಪರ್ಶದಿಂದ ಸಾವಗೀಡಾಗಿದ್ದು, ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು.

ಕುಟುಂಬದವರನ್ನು ಸಂತೈಸಿ 20 ಸಾವಿರ ರೂ. ವಯಕ್ತಿಕ ಧನ ಸಹಾಯ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಸಲಾದಪುರ, ಶಿವಮಹಾಂತಪ್ಪ ಚಂದಾಪುರ, ರಾಜಾ‌ಪಟೇಲ್ ಬೂದನೂರ, ಭಿಕ್ಷಣಗೌಡ, ಬಸನಗೌಡ ಕಾಡಂಗೇರಾ, ಭೀಮಣ್ಣ‌ ಮಾಸ್ತರ, ಶಿವಲಿಂಗರಡ್ಡಿ ಬೂದನೂರ, ಪಂಪಾರಡ್ಡಿ, ಧರ್ಮರಡ್ಡಿ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button