ಕಾವ್ಯ
‘ಅನಿಸಿಕೆ’ ಶ್ವೇತ ಬಂಡೆಗೋಳಮಠ ರಚಿತ ಕಾವ್ಯ
ಅನಿಸಿಕೆ
ಬೀಸು ಗಾಳಿಯೆ ಬೀಸು
ವಿಷದ ಕಲ್ಮಶವ ಅಳಿಸು.
ತಣ್ಣನೆಯ ಪರಿಮಳ ಸೂಸು
ಕೊರೊನ ವೆಂಬ ಮಾರಿಯ ಓಡಿಸು.
ಜಗದಿ ಜನರ ಜೀವ ತೆಗೆದು
ಕುಣಿಯುತಲಿದೆ ಮಾರಿ ಕೊರೊನ.
ರಕ್ತ ಸಂಬಂಧಗಳ ಮೌಲ್ಯ ಮುರಿದು
ಅಳಿಸುತಲಿದೆ ಜಗದಿ ನಿಯಮ.
ಜೀವ ಇಲ್ಲ ಜೀವನ ವೂ ಇಲ್ಲ
ಕೈಯಲ್ಲಿ ಕಾಸು ಕೆಲಸವು ಇಲ್ಲ.
ಜೀವ ತೆತ್ತ ದೇಹಕ್ಕೆ ಮೌಲ್ಯವೂ ಇಲ್ಲ
ಕರಕಲಾಯಿತು ಜಗವೆ ಎಲ್ಲಾ.
ಮನೆಯಲ್ಲೇ ಕಲಿಕೆ, ಕೆಲಸ
ಮಂಕಾಯಿತು ಮನದ ಉಲ್ಲಾಸ.
ಜಗತ್ತಿನಿಂದಲೇ ಕಣ್ಮರೆ ಆಗಲಿ ಹೆಮ್ಮಾರಿ ಕೋವಿಡ್ ವೈರಸ್.
– ಶ್ವೇತ ವಿ. ಬಂಡೆಗೋಳಮಠ🖊️