ಪ್ರಮುಖ ಸುದ್ದಿ
ಸ್ವಕುಳ ಸಾಳಿ ಸಮಾಜದ ಹಿರಿಯ ಸಿದ್ದಣ್ಣ ಮಾಸ್ತರ ಶಿರವಾಳ ನಿಧನ
ಇಂದು ಸಂಜೆ 5 -30 ಗಂಟೆಗೆ ಅಂತ್ಯಕ್ರಿಯೆ
ಸ್ವಕುಳ ಸಾಳಿ ಸಮಾಜದ ಹಿರಿಯ ಸಿದ್ದಣ್ಣ ಮಾಸ್ತರ ಶಿರವಾಳ ನಿಧನ
ಇಂದು ಸಂಜೆ 5 -30 ಗಂಟೆಗೆ ಅಂತ್ಯಕ್ರಿಯೆ
ಶಹಾಪುರಃ ಇಲ್ಲಿನ ಜಿಹ್ವೇಶ್ವರ ಬಡಾವಣೆ ನಿವಾಸಿ ಸ್ವಕುಳ ಸಾಳಿ ಸಮಾಜದ ಮಾಜಿ ಅಧ್ಯಕ್ಷರು, ಸಮಾಜದ ಹಿರಿಯರು ನಿವೃತ್ತ ಶಿಕ್ಷಕ ಸಿದ್ದಣ್ಣ ಮಾಸ್ಟರ್ ಶಿರವಾಳ (89) ಇಂದು ಬೆಳಗಿನಜಾವ ನಿಧನರಾದರು.
ಸಮಾಜದ ಏಳ್ಗೆಗಾಗಿ ಹಲವಾರು ವರ್ಷ ಶ್ರಮಿಸಿದ ಅವರು, ಸಮಾಜದ ಪ್ರಗತಿಗೆ ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಮಾಜ ಕಂಬನಿ ಮಿಡಿದಿದೆ.
ಮೃತರು, ಪತ್ನಿ, ಓರ್ವ ಹೆಣ್ಣು ಮತ್ತು ಮೂರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಶನಿವಾರ ಸಂಜೆ 5-30 ಕ್ಕೆ ನಗರದ ಮಾವಿನಕೆರೆ ಹತ್ತಿರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.