ಪ್ರಮುಖ ಸುದ್ದಿ

ನೂತನ ಅಡ್ವೋಕೇಟ್ ಜನರಲ್ ನೇಮಿಸಿ ರಾಜ್ಯಪಾಲರ ಆದೇಶ!

ಬೆಂಗಳೂರು: ನೂತನ ಅಡ್ವೋಕೆಟ್ ಜನರಲ್ ಆಗಿ ಕೆ. ಪ್ರಭುಲಿಂಗ ಕೆ. ನಾವಡ್ಗಿ ಅವರನ್ನು ನೇಮಿಸಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಆದೇಶಿಸಿದ್ದಾರೆ. ಸಂವಿಧಾನದ 165(1) ರ ಅಡಿ ನೇಮಕಾತಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಡ್ವೋಕೆಟ್ ಜನರಲ್ ಆಗಿದ್ದ ಉದಯ್ ಹೊಳ್ಳ ಅವರು ಮೈತ್ರಿ ಸರ್ಕಾರ ಪತನಗೊಂಡ ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ, ತೆರವಾಗಿದ್ದ ಸ್ಥಾನಕ್ಕೆ ನೂತನ ಅಡ್ವೋಕೆಟ್ ಜನರಲ್ ಆಗಿ ಪ್ರಭುಲಿಂಗ ಕೆ. ನಾವಡ್ಗಿ ಅವರನ್ನು ನೇಮಕ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button