ಪ್ರಮುಖ ಸುದ್ದಿ

ಧೃತಿ ಬಂದು ಅಪ್ಪ..ಪಪ್ಪಾ ಎಲ್ಲಿ ಅಂದ್ರೆ ಏನ್ ಹೇಳೋದು – ರಾಘಣ್ಣ ದುಃಖದ ನುಡಿ

ಧೃತಿ ಬಂದು ಅಪ್ಪ..ಪಪ್ಪಾ ಎಲ್ಲಿ ಅಂದ್ರೆ ಏನ್ ಹೇಳೋದು – ರಾಘಣ್ಣ ದುಃಖದ ನುಡಿ

ವಿವಿ ಡೆಸ್ಕ್ಃ ಪುನೀತ್ ಹಿರಿ ಮಗಳು ಧೃತಿ ಹೊರ ದೇಶದಲ್ಲಿ ಅಭ್ಯಾಸ ಮಾಡುತ್ತಿದ್ದು, ಇಂದು ರಾತ್ರಿ 8-9 ಗಂಟೆವರೆಗೂ ಬರಬಹುದು ಹೀಗಾಗಿ ಅಂತ್ಯಕ್ರಿಯೆ ನಾಳೆ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ.

ಮಗಳು ದೃತಿ ನನ್ನನ್ನ ಅಪ್ಪ ಎಂದೇ ಕರೆಯುತ್ತಾಳೆ. ಅವರ ತಂದೆಯನ್ನ ಪಪ್ಪಾ ಎನ್ನುತ್ತಾಳೆ. ಹೀಗಾಗಿ ಧೃತಿ ಬಂದು ಅಪ್ಪ ಪಪ್ಪಾ ಎಲ್ಲಿ ಅಂದ್ರೆ ಏನ್ ಹೇಳೋದು ಎಂದು ತಮ್ಮ ದುಃಖ ಭರಿತ ಮಾತನ್ನು ಮಾಧ್ಯಮದವರ ಮುಂದೆ ತುಂಬಾ ನೋವಿನಿಂದಲೇ ಹಂಚಿಕೊಂಡರು. ಎಲ್ಲರಿಗೂ ಅಪ್ಪು ದರ್ಶನಕ್ಕೆ ಅವಕಾಶವಿದೆ. ಅಭಿಮಾನಿಗಳು ತಾಳ್ಮೆ ಕಾಯ್ದುಕೊಳ್ಳಬೇಕು. ನಾಳೆವರೆಗೂ ದರ್ಶನ ಪಡೆಯಬಹುದು. ನಾಳೆ ಅಂದ್ರೆ ರವಿವಾರ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪುನೀತ್ ಮಗಳು ಧೃತಿ ಸೇರಿದಂತೆ ಅವರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಮತ್ತು ಕುಟುಂಬಸ್ಥರು ನಂಬಿದ ರಾಯರು ನೀಡಲಿ ಎಂದ ವಿವಿ ಬಳಗ ಪ್ರಾರ್ಥಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button