ಪ್ರಮುಖ ಸುದ್ದಿ

ಮಾನ್ಸೂನ್ ಅಧಿವೇಶನಕ್ಕೆ‌ ಸೋನಿಯಾ, ರಾಹುಲ್ ಗೈರು ಯಾಕೆ ಗೊತ್ತಾ.?

ನವದೆಹಲಿಃ ಇಂದು ಸೆ.14 ಸಂಸತ್ತಿನ‌ ಮಾನ್ಸೂನ್ ಅಧಿವೇಶನ ಆರಂಭವಾಗಲಿದೆ. ಆದರೆ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಬಿಸಿ‌ ಮುಟ್ಟಿಸಬೇಕಿದ್ದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ‌ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ‌ ಇರ್ವರು ಗೈರು ಇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಾರಣ ಸೋನಿಯಾ ಗಾಂಧಿ ಅವರ ವಾರ್ಷಿಕ ಆರೋಗ್ಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿರುವ ಕಾರಣ ಅಧಿವೇಶನ ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ತಾಯಿ ಸೋನಿಯಾ ಗಾಂಧಿ ಜೊತೆ ರಾಹುಲ್‌ ಗಾಂಧಿ ಹೊರಟಿರುವದರಿಂದ ಅವರು‌ ಅಧಿವೇಶನದ ಆರಂಭಿಕದಲ್ಲಿ ಭಾಗವಹಿಸುವದಿಲ್ಲ ಎನ್ನಲಾಗಿದೆ.

ಆದರೆ‌ ಎರಡು‌ ಮೂರು ದಿನಗಳಲ್ಲಿ ರಾಹುಲ್ ವಾಪಸ್ ಆಗಮಿಸಿ ಅಧಿವೇಶನದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಸೋನಿಯಾ ಗಾಂಧಿ ಬಳಿ ಪ್ರಿಯಾಂಕಾ ವಾದ್ರಾ ಬಂದ ನಂತರ ರಾಹುಲ್ ಭಾರತಕ್ಕೆ ವಾಪಾಸ್ ಆಗಲಿದ್ದು,‌ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಸೋನಿಯಾ ಗಾಂಧಿ ಅವರು ಕನಿಷ್ಠ ಎರಡು ವಾರಗಳ ಕಾಲ‌ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿದೆ. ಹೀಗಾಗಿ‌ ಮಾನ್ಸೂನ್ ಅಧಿವೇಶನ ಆರಂಭಿಕ ದಿನಗಳಲ್ಲಿ ಗಾಂಧಿಯವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಎದುರಿಸಲಿದ್ದಾರೆ.

ಭಾರತ-ಚಿನಾ ಎಲ್‌ಎಸಿ ಫೇಸ್ ಆಫ್, ಆರ್ಥಿಕತೆ,‌ ಕೋವಿಡ್ -19 ನಿರ್ವಹಣೆ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button