ಪ್ರಮುಖ ಸುದ್ದಿ

ಅಮೇರಿಕಾದಲ್ಲಿ ಕರ್ನಾಟಕ ವಿದ್ಯಾರ್ಥಿ ಹತ್ಯೆ ಮಾಡಿದ್ದ ಆರೋಪಿ ಬಂಧನ

ಮೈಸೂರುಃ  ಅಮೆರಿಕದಲ್ಲಿ ಮೈಸೂರಿನ ವಿದ್ಯಾರ್ಥಿ ಅಭಿಷೇಕ್​ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆಫ್ರಿಕಾ ಮೂಲದ ಎರಿಕ್ ಡೆವನ್ ಟರ್ನರ್ (42) ಎಂದು ತಿಳಿದು ಬಂದಿದೆ.

ನವೆಂಬರ್ 28ರಂದು ತನ್ನ ಕೆಲಸ ಮುಗಿಸಿ ಹೋಟೆಲ್​ನಿಂದ ತೆರಳುತ್ತಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೋಣೆ ಖಾಲಿ ಮಾಡುವಂತೆ ಆ ಹೋಟೆಲ್​ನಲ್ಲಿ ರೂಂ ಬಾಡಿಗೆಗೆ ಪಡೆದಿದ್ದ ಆರೋಪಿಗೆ ಅಭಿಷೇಕ್ ಇಂಟರ್ ಕಾಮ್ ಫೋನ್ ಮೂಲಕ 2 ರಿಂದ 3 ಬಾರಿ ತಿಳಿಸಿದ್ದ ಎನ್ನಲಾಗಿದೆ.

ಆದರೂ ಎರಿಕ್ ಡೆವನ್ ಟರ್ನರ್ ರೂಂ ಖಾಲಿ ಮಾಡಿರಲಿಲ್ಲ. ಇದರಿಂದ ಅಭಿಷೇಕ್, ರೂಮಿನ ಬಳಿ ಬಂದು ಬೆಲ್ ರೂಂ ಬೆಲ್ ಮಾಡಿದ್ದಾನೆ. ಇದರಿಂದಾಗಿ ಕೋಪಗೊಂಡ ಆತ ಸುಮ್ಮನೆ ಕಿರಿಕ್ ಮಾಡುತ್ತಿಯಾ ಎಂದು ಏಕಾಏಕಿ ಅಭಿಷೇಕ್ ಗೆ ಗುಂಡು ಹೊಡೆದು ಪರಾರಿಯಾಗಿದ್ದ. ಈತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. ಕಿರಿಕಿರಿ ಮಾಡಿದ್ದಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ್ದೇನೆ ಎಂದು ಬಂಧಿತ ಆರೋಪಿ ಸಹ ಹೇಳಿಕೆ ನೀಡಿದ್ದು, ಪ್ರಕರಣ ಕುರಿತು ತನಿಖೆ ನಂತರವೇ ಸತ್ಯಾಂಶ ಹೊರಬರಲಿದೆ.

Related Articles

Leave a Reply

Your email address will not be published. Required fields are marked *

Back to top button