Homeಜನಮನಪ್ರಮುಖ ಸುದ್ದಿ
ರೈತರು ಗಮನಿಸಿ: ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಶೀಘ್ರದಲ್ಲೇ ನಿಮ್ಮ ಖಾತೆಗೆ ಜಮಾ!

ಪಿ.ಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಬಿಡುಗಡೆಗೆ ರೈತರು ಕಾಯುತ್ತಿದ್ದಾರೆ.
ಪಿ.ಎಂ ಕಿಸಾನ್ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ವಾರ್ಷಿಕ 6 ಸಾವಿರ ರೂಪಾಯಿ ಮೊತ್ತದ ಹಣವನ್ನು ಮೂರು ಬಾರಿ ಬಿಡುಗಡೆ ಮಾಡುತ್ತಿದೆ. ಈಚೆಗಷ್ಟೇ ಪಿ.ಎಂ ಕಿಸಾನ್ನ 17ನೇ ಕಂತು ಬಿಡುಗಡೆಯಾಗಿದ್ದು, ಇದೀಗ ಇನ್ನು ಕೆಲವೇ ದಿನಗಳಲ್ಲಿ ಪಿ.ಎಂ ಕಿಸಾನ್ನ 18ನೇ ಕಂತು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ ಅನುದಾನವನ್ನು ಅಕ್ಟೋಬರ್ನಲ್ಲಿ ರೈತರ ಖಾತೆಗೆ ಜಮೆ ಮಾಡಲಿದೆ ಎಂದು ಹೇಳಲಾಗಿದೆ.