ಪ್ರಮುಖ ಸುದ್ದಿ
ಗೃಹ ಸಚಿವ ಅಮಿತ್ ಶಾ ಭಾಷಣ ಶೇರ್ ಮಾಡಿದ ಪ್ರಧಾನಿ ಮೋದಿ!
ನವದೆಹಲಿ : 370 ವಿಧಿ ರದ್ದುಗೊಳಿಸುವ ವಿಧೇಯಕ ಮಂಡಿಸುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಅಮಿತ್ ಶಾ ಭಾಷಣ ವಿಸ್ತೃತ ಮತ್ತು ಆಳವಾವಾಗಿತ್ತು . ಇತಿಹಾಸದ ಅನ್ಯಾಯ ಎತ್ತಿ ತೋರಿಸುವಂತಿತ್ತು. ಜಮ್ಮು – ಕಾಶ್ಮೀರದ ಸಹೋದರ-ಸಹೋದರಿಯರಿಗೆ ನಮ್ಮ ದೂರದಷ್ಟಿಯನ್ನು ತಿಳಿಸಿಕೊಟ್ಟಿತು. ಇನ್ನೊಮ್ಮೆ ಅಮಿತ್ ಶಾ ಅವರ ಅದ್ಭುತವಾದ ಭಾಷಣ ಕೇಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಅವರ ಭಾಷಣದ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
Home Minister @AmitShah Ji’s speech in the Rajya Sabha was extensive and insightful. It accurately highlighted the monumental injustices of the past and coherently presented our vision for the sisters and brothers of J&K. Do hear. https://t.co/ho7PPzyz5w
— Narendra Modi (@narendramodi) August 5, 2019