ಕಾವ್ಯ
ಕಂಗಳ ಮಿಂಚಿಗೆ ಕಂಗಾಲು, ಪ್ರೀತಿಗಾಗಿ ಧ್ಯಾನ
ಯಾವ ಮಿಂಚಿಗೂ ಕಮ್ಮಿಲ್ಲ ನಿನ್ನ ಕಣ್ಣೋಟ
ಕದ್ದು ಕದ್ದು ನಿನ್ನ ನೋಡುಷ್ಟರಲ್ಲಿ ನೀ ಬೀರಿದ ನೋಟ
ಕಪಾಳಕ್ಕೆ ಕೋಲ್ಮಿಂಚಿನಂತೆ ಹೊಡೆಯುವುದು ನಿಶಬ್ಧವಾಗಿ..
ಆದರೂ ನೋಡುವಾಸೆ ನನ್ನ ಕಂಗಳಿಗೆ ನಿನ್ನ, ಮೈಮಾಟ, ನವಿಲಿನ ನಡಿಗೆ, ಮನಸೆಳೆಯುವ ಮೋಹಕತೆ, ಕಪ್ಪು ಜಲಪಾತದಂತೆ ಧುಮ್ಮಿಕ್ಕುವ ಮುಂಗುರುಳು.
ಕದ್ದು ನೋಡಿದರೆ ನೀನ್ನ ಕಂಗಳು ನಮಗೆ ಕಪಾಳ ಮೋಕ್ಷ ನೀಡಿದಂತೆ ಭಾಸ.
ಆ ನಿನ್ನ ಕಂಗಳ ನೋಟಕೆ ಹೆದರಿ ಸನಿಹ ಬರದೆ ಮಾತು ಆಡದೆ ನಿನ್ನ ಹಿಂದೆ ಅಲೆಯುವ ಅಲೆಮಾರಿಯಾದೆ ನಾ.
ಆ ನಿನ್ನ ಕಂಗಳ ಮಿಂಚಿನ ಹೊಡೆತಕ್ಕೆ ಕಂಗಾಲಾಗಿದ್ದೇನೆ
ನಾ ನಿನ್ನ ಪ್ರೀತಿಸುವೆ ನನ್ನ ಮೇಲೆ ಕರುಣೆ ಇರಲಿ ದೇವಿ ನಿನ್ನ ಕಣ್ಣಿನ ಪ್ರತಾಪ ಕಡಿಮೆಗೊಳಿಸಲು ನಾನೇನು ವ್ರತ ಮಾಡಲಿ ಹೇಳು..
ನಿನ್ನ ಆಶೀರ್ವಾದ ಪ್ರಾಪ್ತವಾಗಲು ನಿತ್ಯ ನಿನ್ನ ಧ್ಯಾನದಲಿ ಕಾಲ ಕಳೆಯುತ್ತಿರುವೆ, ಬೇಗ ಮನ್ನಿಸು ದೇವಿ, ನೀ ಗುಡುಗಿದರೆ, ದೇವಲೋಕವೇ ಹಾಳಾಗಿ ಹೋಗುವದು, ಭರದಿ ಸಾಗುವ ಮೋಡಗಳು ತಟಸ್ಥಗೊಂಡಾವು..
ಮಮತೆ ದಯೇ ಇರಲಿ ಈ ನಿನ್ನ ಭಕ್ತನ ಮೇಲೆ..