ಪ್ರಮುಖ ಸುದ್ದಿ
ಸಿಲಿಂಡರ ಸ್ಪೋಟ ಹೊಟೇಲ್, ಹೇರ್ ಸೆಲೂನ್ಗೆ ಬೆಂಕಿ
ಯಾದಗಿರಿಃ ಶಾರ್ಟ್ ಸರ್ಕ್ಯುಟ್ ನಿಂದ ಹೋಟೆಲ್ ನಲ್ಲಿದ್ದ ಎರಡು ಸಿಲೆಂಡರ್ ಸ್ಪೋಟಗೊಂಡು ಅಪಾರ ಹಾನಿಯಾದ ಸಂಭವಿಸಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ .
ಪಟ್ಟಣ ನಿವಾಸಿ ಈಶಪ್ಪ ಎಂಬುವವರಿಗೆ ಸೇರಿದ ಹೋಟೆಲ್ ಇದಾಗಿದೆ. ಅಲ್ಲದೆ ಹೊಟೇಲ್ ಪಕ್ಕದ ಹೇರ್ ಸೆಲೂನ್ ಗೂ ಬೆಂಕಿ ವ್ಯಾಪಿಸಿದ್ದು, ಅಪಾರ ಹಾನಿಯುಂಟು ಮಾಡಿದೆ ಎನ್ನಲಾಗಿದೆ.
ಏಕಾಏಕಿ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡು ಹೊಟೇಲ್ ಹಾಗೂ ಹೇರ್ ಸೆಕೂನ್ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.