ಪ್ರಮುಖ ಸುದ್ದಿ
ಯಾದಗಿರಿಃ 123 ಕೊರೊನಾ ಪ್ರಕರಣ ಪತ್ತೆ, ಒಟ್ಟು 4500 ಕ್ಕೆ ಏರಿಕೆ, 31 ಮಂದಿ ಬಲಿ
ಯಾದಗಿರಿಃ 123 ಕೊರೊನಾ ಪ್ರಕರಣ ಪತ್ತೆ, ಒಟ್ಟು 4500 ಕ್ಕೆ ಏರಿಕೆ
ಯಾದಗಿರಿಃ ಜಿಲ್ಲಾದಾದ್ಯಂತ ಶನಿವಾರ 123 ಕೊರೊನಾ ಸೋಂಕು ದೃಡವಾಗಿದ್ದು, ಒಟ್ಟು ಜಿಲ್ಲೆಯ ಸೋಂಕಿತರ ಸಂಖ್ಯೆ 4500 ಕ್ಕೆ ಏರಿಕೆಯಾಗಿದೆ.
ಪತ್ತೆಯಾದ 123 ಪ್ರಕರಣಗಳಲ್ಲಿ 52 ಜನ ಯಾದಗಿರಿ ನಗರ ಮತ್ತು ಗ್ರಾಮೀಣದವರಾದರೆ, 41 ಜನ ಶಹಾಪುರ ನಗರ ಮತ್ತು ಗ್ರಾಮೀಣ ಭಾಗದವರಾಗಿದ್ದಾರೆ. ಉಳಿದ 30 ಪ್ರಕರಣಗಳು ಸುರಪುರ ತಾಲೂಕಿನವರಾಗಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 2,916 ಮಂದಿ ಚೇತರಿಸಿಕೊಂಡಿದ್ದಾರೆ. 1,553 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಒಟ್ಟು 31 ಮಂದಿ ಚಿಕಿತ್ಸೆಗೆ ಸ್ಪಂಧಿಸದೆ ಕೊರೊನಾಗೆ ಬಲಿಯಾಗಿದ್ದಾರೆ.