ಪ್ರಮುಖ ಸುದ್ದಿ

ಸುರಪುರಃ 16 ಜನರಿಗೆ ಪಾಸಿಟಿವ್, ಬಸ್ ಘಟಕ‌ ಸೀಲ್ ಡೌನ್

ಸುರಪುರಃ 16 ಜನರಿಗೆ ಪಾಸಿಟಿವ್, ಬಸ್ ಘಟಕ‌ ಸೀಲ್ ಡೌನ್
ಯಾದಗಿರಿಃ ಜಿಲ್ಲೆಯ ಸುರಪುರ ಬಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 16 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಶನಿವಾರ ಸಂಜೆಯಿಂದ ಬಸ್ ಘಟಕ ಸೀಲ್ ಡೌನ್ ಮಾಡಲಾಗಿದೆ ಎಂದು ತಾಲೂಕು ಆಡಳಿತ‌ ತಿಳಿಸಿದೆ.

ಶುಕ್ರವಾರವೇ ಸೀಲ್ ಡೌನ್ ಮಾಡಬೇಕಿತ್ತು. ಎಸ್ಸೆಸ್ಸೆಲ್ಸಿ ಯ ಕೊನೆಯ ವಿಷಯ ಪರೀಕ್ಷೆ ನಡೆದಿದ್ದರಿಂದ ಪರೀಕ್ಷೆ‌ ಮುಗಿದ ಬಳಿಕ ಶನಿವಾರ ಸಂಜೆ‌ ಬಸ್ ಘಟಕ ಸೀಲ್ ಡೌನ್ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಘಟಕದ ಯಾವುದೇ ಬಸ್ ಸಂಚಾರ ಕ್ಕೆ ಆಸ್ಪದ ಇರುವದಿಲ್ಲ.

ಒಟ್ಟಾರೆ ಸಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟ ತಿಳಿಸಿದ್ದಾರೆ. ಮೊದಲಿಗೆ ಬಸ್ ಘಟಕದ 8 ಜನರಿಗೆ ಕೊರೊನಾ ಪಾಸಿಟಿವ್ ತಗುಲಿತ್ತು.‌‌ ಪ್ರಾಥಮಿಕ ಹಂತದ 8 ಜನರಿಗೂ ಮತ್ತೆ ಕೊರೊನಾ ತಗುಲಿದ್ದು, ಘಟಕದ ಕಾರ್ಯ ಸ್ಥಗಿತಗೊಳಿಸಿ ಬೀಗ ಜಡಿಯಲಾಗಿದೆ. ಘಟಕದ ಇತರೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮದಿಂದ ಜಾಗೃತರಾಗಿ‌ರಬೇಕು ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button