ಪಿಯುಸಿಯಲ್ಲಿ ಶೇ.82 ಅಂಕ ಪಡೆದ ಸೈರಾಟ್ ನಾಯಕಿ
ಸೈರಾಟ್ ಚಿತ್ರಕ್ಕೆ 100% ನಾಯಕಿ ರಿಂಕುಗೆ 82%
ಸೈರಾಟ್ ಮರಾಠಿ ಚಲನ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ, 2016ರಲ್ಲಿ ಬಿಡುಗಡೆಗೊಂಡಿದ್ದ ಈ ಚಲನ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತ್ತು.
ಪಡ್ಡೆ ಹುಡಗ ಹುಡಗಿಯರು ಈ ಚಿತ್ರದ ಹೆಸರೆತ್ತಿದ್ದಾರೆ ಸಾಕು ಇಂದಿಗೂ ಈ ಚಿತ್ರದಲ್ಲಿ ನಟಿಸಿದ ನಾಯಕಿ ಕುರಿತು ಮೆಚ್ವುಗೆ ವ್ಯಕ್ತಪಡಿಸುತ್ತಾರೆ.
ಅಲ್ಲದೆ ಆಕೆಯ ಮುಗ್ಧ ಪ್ರೀತಿ ನಗೆ ಸಹಜ ಸುಂದರಿಯ ಮೈಮಾಟ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ್ದು ಸುಳ್ಳಲ್ಲ.
ಆದರೆ ಈಗ ಹೇಳ ಹೊರಟಿರುವದು, ಆಕೆಯ ಶೈಕ್ಷಣಿಕ ವಿಷಯದ ಬಗ್ಗೆ, ಸೈರಾಟ್ ಮರಾಠಿ ಚಿತ್ರ ಬಿಡುಗಡೆಗೊಂಡಿದ್ದಾಗ ಆಕೆ ಇನ್ನೂ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು ಎನ್ನಲಾಗಿತ್ತು.
ಪ್ರಸ್ತುತ ವರ್ಷ ಈಕೆ ಪಿಯುಸಿಯಲ್ಲಿ ಶೇ.82 ರಷ್ಟು ಅಂಕ ಪಡೆದು ಉತ್ತೀರ್ಣ ಆಗಿದ್ದಾಳೆ. ಪಿಯು ವಿದ್ಯಾರ್ಥಿನಿಯಾದ ಸೈರಾಟ್ ಹಿರೋಯಿನ್ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಸೈರಾಟ್ ಚಲನಚಿತ್ರದಷ್ಟೆ ಪರೀಕ್ಷೆಯಲ್ಲೂ ಪಾಸಾಗಿರುವದು ಆಕೆಯ ಇಂಟಲಿಜೆಂಟ್ ನ್ನು ತೋರುತ್ತದೆ.
ಸೈರಾಟ್ ಮರಾಠಿ ಚಿತ್ರ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್ ಆಗಿರುವದು ಒಂದು ದಾಖಲೆಯಾದರೆ,
ಈ ಚಿತ್ರದ ನಾಯಕಿಯಾಗಿದ್ದ ರಿಂಕು ರಾಜ್ ಗುರು ‘ಸೈರಾಟ್’ ಯಶಸ್ಸಿನ ಬಳಿಕ ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ್ದರು.
ಚಿತ್ರರಂಗದಲ್ಲಿ ಹಲವು ಅವಕಾಶಗಳು ಅರಸಿಕೊಂಡು ಬಂದಿದ್ದವು. ಅಲ್ಲದೆ ಸೈರಾಟ್ ಚಿತ್ರಕ್ಕಾಗಿ ರಿಂಕು, ರಾಷ್ಟ್ರ ಪ್ರಶಸ್ತಿಯನ್ನೂ ಸಹ ಪಡೆದಿದ್ದರು.
ಪ್ರಸ್ತುತ ನಟಿ ರಿಂಕು ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಶೇಕಡ 82 ಅಂಕಗಳೊಂದಿಗೆ ತೇರ್ಗಡೆಯಾಗಿರುವ ಕುರಿತು ಎಲ್ಲಡೆ ಸುದ್ದಿಯಾಗಿದೆ.
ಚಿತ್ರರಂಗದ ಜೊತೆಜೊತೆಗೆ ಶಿಕ್ಷಣವನ್ನೂ ಮುಂದುವರಿಸಿರುವ ರಿಂಕು, ಕಲಾ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.