ಪ್ರಮುಖ ಸುದ್ದಿ
ಸೆಲ್ಫಿ ವಿಡಿಯೋ ಮಾಡಿ ಪಾಲಕರಿಗೆ ಕ್ಷಮೆ ಕೇಳಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.!
ಸೆಲ್ಫಿ ವಿಡಿಯೋ ಮಾಡಿ ಪಾಲಕರಿಗೆ ಕ್ಷಮೆ ಕೇಳಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.!
ಯಾದಗಿರಿಃ ಸೆಲ್ಫಿ ವಿಡಿಯೋ ಮೂಲಕ ಪಾಲಕರಿಗೆ ಕ್ಷಮೆ ಕೋರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗೊಂದಡಿಗಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪ್ರೇಮಿಗಳಿಬ್ಬರು ಅನ್ಯಜಾತಿಯಾಗಿದ್ದು ಪೋಷಕರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆ ಸೆಪ್ಟೆಂಬರ್ 8 ರಂದು ಮನೆ ಬಿಟ್ಟು ತೆರಳಿದ್ದರು ಎನ್ನಲಾಗಿದೆ.
ಇಬ್ಬರು ಕಾಣದಾದಾಗ ಹುಡುಕಾಟ ನಡೆಸಲಾಗಿ ಗ್ರಾಮದ ಹೊರವಲಯದ ಬಾವಿಯಿಂದದಲ್ಲಿ ಮೃತದೇಹ ಪತ್ತೆಯಾಗಿರುವದು ತಿಳಿದು ಬಂದಿದೆ.
ಗೊಂದಡಿಗಿ ಗ್ರಾಮದ ಹನುಮಂತ (25) ಮತ್ತು ಅದೇ ಗ್ರಾಮದ ಮಹಾದೇವಿ (18) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಹನುಮಂತ ಆಟೋಚಾಲಕನಾಗಿದ್ದ ಎನ್ನಲಾಗಿದೆ. ಕಳೆದ ಎರಡು ವರ್ಷದಿಂದ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.