ವಿನಯ ವಿಶೇಷ

ಯಾವ ರಾಶಿಗೆ ಯಾವ ಬಲ.? ದಿನ ಭವಿಷ್ಯ ಓದಿ

ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಶತಭಿಷ
ಋತು : ವರ್ಷ
ರಾಹುಕಾಲ 09:24 – 10:58
ಗುಳಿಕ ಕಾಲ 06:16 – 07:50
ಸೂರ್ಯೋದಯ 06:15:47
ಸೂರ್ಯಾಸ್ತ 18:47:46
ತಿಥಿ : ದ್ವಿತೀಯ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಉದ್ಯೋಗದಲ್ಲಿ ನಿಮ್ಮ ಸ್ಥಾನ ಹಾಗೂ ವ್ಯಕ್ತಿತ್ವಕ್ಕೆ ಕೆಲವು ಸಮಸ್ಯೆ ಬರಬಹುದಾಗಿದೆ ಎಚ್ಚರವಿರಲಿ. ಈ ದಿನ ಉತ್ತಮ ಕೆಲಸ ಮಾಡಲು ಪ್ರಯತ್ನಿಸುತ್ತೀರಿ ಆದರೆ ಸಹವರ್ತಿಗಳಿಂದ ಕೆಲಸವು ಗೊಂದಲದ ಗೂಡಾಗಬಹುದು. ಸಹೋದರರಲ್ಲಿನ ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿ. ಪತ್ನಿಯ ಸಂಗಡ ವ್ಯವಹಾರದ ಚರ್ಚೆ ನಡೆಸುವುದರಿಂದ ಉತ್ತಮವಾದ ವಿಷಯವು ಬೆಳೆಯಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ವೃಷಭ ರಾಶಿ
ಧನಾತ್ಮಕ ಚಿಂತನೆಯ ಫಲವಾಗಿ ಕಾರ್ಯಗಳು ಪ್ರಗತಿಯಾಗಲಿದೆ. ನಿಮ್ಮ ವ್ಯವಸ್ಥಿತ ಕಾರ್ಯಶೈಲಿಯನ್ನು ಎಲ್ಲರೂ ಮೆಚ್ಚುವರು. ಉದ್ಯೋಗದಲ್ಲಿ ಮುಂಭಡ್ತಿ ಆಗುವ ಸಾಧ್ಯತೆ ಕಾಣಬಹುದು. ಆಕಸ್ಮಿಕವಾದ ಲಾಭ ಯೋಗಗಳ ಲಕ್ಷಣ ಕಂಡುಬರುತ್ತದೆ. ಸಂಗಾತಿಯೊಂದಿಗೆ ಶಾಂತ ರೀತಿಯ ವರ್ತನೆ ತೋರಿಸುವುದು ಒಳಿತು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಮಿಥುನ ರಾಶಿ
ಪ್ರಯೋಗಶೀಲತೆಯು ಈ ದಿನ ಹೆಚ್ಚಾಗಿ ಕಂಡುಬರಲಿದೆ. ಉತ್ತಮ ಆಲೋಚನೆಗಳಿಂದ ಹೊಸತನದತ್ತ ಪ್ರಯಾಣ ಸಾಗಲಿದೆ. ದೊಡ್ಡ ಮಟ್ಟದ ಯೋಜನೆ ಪಡೆಯಲು ಹರಸಾಹಸ ಪಡುವಿರಿ. ಕೆಲವರ ಮಾತುಗಳು ನಿಮ್ಮ ದಾರಿಯನ್ನು ತಪ್ಪಿಸಬಹುದಾದ ಸಾಧ್ಯತೆ ಕಂಡುಬರುತ್ತದೆ. ನಂಬಿಕಸ್ಥರು ಅಥವಾ ಆತ್ಮೀಯರು ನಿಮ್ಮ ಯೋಜನೆಗಳನ್ನು ನಕಲು ಮಾಡಬಹುದಾದ ಸ್ಥಿತಿಯಿದೆ ಎಚ್ಚರದಿಂದಿರಿ. ಸಂತೋಷದ ಪ್ರಯಾಣವನ್ನು ಈದಿನ ಅನುಭವಿಸುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ನಿಮ್ಮ ಕೆಲಸವನ್ನು ಆದಷ್ಟು ಹೆಚ್ಚಿನ ಜನಕ್ಕೆ ತಲುಪುವ ರೀತಿ ಮಾಡುವ ವ್ಯವಸ್ಥೆ ನಿಮ್ಮಿಂದ ಆಗಬೇಕಾಗಿದೆ. ಬಂದು ಮಿತ್ರರು ನಿಮ್ಮ ಯೋಜನೆಗಳಿಗೆ ಸಹಾಯ ಹಸ್ತ ನೀಡಲಿದ್ದಾರೆ. ಹೊಸತನ ಹಾಗೂ ಹೊಸ ಸ್ನೇಹಿತರ ಪರಿಚಯ ನಿಮ್ಮಲ್ಲಿ ಕಂಡುಬರುವುದು. ಆರ್ಥಿಕ ವ್ಯವಸ್ಥೆಯನ್ನು ಉತ್ತಮವಾಗಿ ರೂಪಿಸಲು ಪಣತೊಡುವಿರಿ. ನೀವು ಒಂದು ಸಮೂಹವನ್ನು ಯಶಸ್ವಿಯಾಗಿ ನಡೆಸುವಂತಹ ನಾಯಕತ್ವ ಗುಣವನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ಜಮೀನು ಮಾರಾಟ ಪ್ರಕ್ರಿಯೆಗಳಲ್ಲಿ ಯಶಸ್ವಿ ಆಗುವಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಸಿಂಹ ರಾಶಿ
ಆರ್ಥಿಕವಾಗಿ ಬಹಳ ಕಷ್ಟ ಪಡಬೇಕಾದ ಸಂದರ್ಭಗಳು ಬರಲಿದೆ. ನಿಮ್ಮ ವ್ಯವಹಾರಗಳಲ್ಲಿ ಅಸಮತೋಲನ ಕಂಡುಬರುತ್ತದೆ ಇದರಿಂದ ವ್ಯವಸ್ಥಿತ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಬಹುದು. ಮಾಡುವ ಕೆಲಸದಲ್ಲಿ ಆಲಸ್ಯತನ ಹೆಚ್ಚಾಗಲಿದೆ. ನಿಮ್ಮ ಮಾತುಗಳು ಇನ್ನೊಬ್ಬರನ್ನು ಭಿನ್ನಾಭಿಪ್ರಾಯ ತರಿಸಬಹುದು ಆದಷ್ಟು ಎಚ್ಚರಿಕೆಯಿಂದ ಮಾತನಾಡಿ. ಕೆಲವರು ನಿಮ್ಮ ಅಭಿಪ್ರಾಯವನ್ನು ಸಾರಸಗಟಾಗಿ ತಳ್ಳಿಹಾಕುವರು ಇದು ನಿಮ್ಮಲ್ಲಿ ಸಿಟ್ಟು ತರಿಸುತ್ತದೆ. ಈ ದಿನ ಹೆಚ್ಚಿನ ತಾಳ್ಮೆ ವಹಿಸುವುದು ಸೂಕ್ತ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9045098262

ಕನ್ಯಾ ರಾಶಿ
ಪ್ರಚಲಿತ ವಿಷಯದ ಬಗ್ಗೆ ನಿಮ್ಮ ಜ್ಞಾನ ಬೆಳೆಸಿಕೊಳ್ಳುವುದು ಸೂಕ್ತ, ಇದು ನಿಮ್ಮ ವೃತ್ತಿ ರಂಗಕ್ಕೆ ಬಹಳಷ್ಟು ಉಪಯೋಗವಾಗಲಿದೆ. ವ್ಯವಹಾರದ ವಿಷಯವಾಗಿ ಆದಷ್ಟು ಗಮನ ಕೇಂದ್ರೀಕರಿಸಿ. ಭೋಗದ ವಿಲಾಸಿತನಕ್ಕೆ ಮರುಳಾಗಿ ಉದ್ಯೋಗದಲ್ಲಿ ನಷ್ಟವಾಗಬಹುದು. ಮನೋಕಾಮನೆಗಳನ್ನು ನಿಯಂತ್ರಣದಲ್ಲಿಡುವುದು ಸೂಕ್ತ. ಈ ದಿನ ಪತ್ನಿಯ ಜೊತೆಗೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಪ್ರಸ್ತಾಪ ನಡೆಯಬಹುದಾದ ಸಾಧ್ಯತೆಗಳುಂಟು. ಹೂಡಿಕೆಗಳ ಬಗ್ಗೆ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ತುಲಾ ರಾಶಿ
ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಕಾರ್ಯವೈಕರಿ ಉತ್ತಮವಾಗಿರಲಿದೆ. ರಕ್ಷಣಾ ಯೋಜನೆಯನ್ನು ಬಲಿಷ್ಠವಾಗಿ ರೂಪಿಸುತ್ತೀರಿ. ನಿಮ್ಮ ವ್ಯವಹಾರವನ್ನು ಇನ್ನೂ ಹೆಚ್ಚಿನ ಮಟ್ಟದ ವಿಸ್ತರಣೆ ಮಾಡಲು ಸಾಧ್ಯವಾಗುವುದು. ಸ್ವತಂತ್ರ ಉದ್ಯಮದ ಕನಸಿಗೆ ರೆಕ್ಕೆ ಬರಲಿದೆ. ಸಾಲದ ವ್ಯಾಪಾರಗಳನ್ನು ಆದಷ್ಟು ನಿಷೇಧಿಸಿ. ಜಮೀನು ಖರೀದಿಯಲ್ಲಿ ಉತ್ತಮ ಸಫಲತೆ ಪಡೆಯುವಿರಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಕುಟುಂಬಕ್ಕೆ ಉಪಯೋಗವಾಗುವಂತಹ ಕಾರ್ಯದಲ್ಲಿ ತೊಡಗುವಿರಿ. ಕೆಲಸದಲ್ಲಿ ಉತ್ತಮ ನಿರೀಕ್ಷೆ ಇದ್ದು ನಿಮ್ಮ ಆಸಕ್ತಿದಾಯಕ ಚಟುವಟಿಕೆಯಿಂದ ಲಾಭದಾಯಕ ಗೊಳಿಸುವಿರಿ. ಸಂಕೋಚದ ಸ್ವಭಾವವನ್ನು ತೆಗೆದುಹಾಕಿ ಆತ್ಮೀಯರ ಬಳಿ ಸಹಾಯ ಪಡೆಯುವುದು ಒಳಿತು. ನಿರುದ್ಯೋಗದ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆ ಕಾಣಬಹುದು. ಆತುರದ ನಿರ್ಧಾರಗಳು ತಪ್ಪು ಲೆಕ್ಕಾಚಾರ ತರಲಿದೆ ಎಚ್ಚರವಿರಲಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಕ್ರಿಯಾಶೀಲತೆಯಿಂದ ನವೀನ ಕಾರ್ಯಕ್ರಮಗಳನ್ನು ಪ್ರಾರಂಭಿಸುವಿರಿ. ದೈವಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು. ಸಭೆ-ಸಮಾರಂಭಗಳಲ್ಲಿ ನಿಮ್ಮ ಮುಂದಾಳತ್ವ ವಿಶೇಷವಾಗಿ ವ್ಯಕ್ತ ವಾಗಲಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ. ಉಪಯುಕ್ತ ಮಾಹಿತಿ ಪಡೆದು ಯೋಜನೆಗಳಲ್ಲಿ ಪಾಲ್ಗೊಳ್ಳಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಮಕರ ರಾಶಿ
ಶೈಕ್ಷಣಿಕ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳ ಬೇಕಾದ ಸಂದರ್ಭವಿದು. ಅತಿಯಾದ ಹೊರಗಿನ ಪದಾರ್ಥಗಳನ್ನು ಸೇವಿಸುವುದು ಸರಿಯಲ್ಲ. ಕುಟುಂಬದ ಅಗತ್ಯಗಳನ್ನು ನೆರವೇರಿಸುವ ಸಂದರ್ಭ ಬರಲಿದೆ. ನಿಮ್ಮ ಹಿತಾಸಕ್ತಿಯಿಂದ ಶುಭಕಾರ್ಯದ ತಯಾರಿ ನಡೆಸುವ ಸಾಧ್ಯತೆ ಕಾಣಬಹುದು. ಅಪ್ರಯೋಜಕ ಯೋಜನೆಗಳಲ್ಲಿ ಕಾಲಹರಣ ಮಾಡಬೇಡಿ. ದುಡಿಮೆಯ ಉತ್ತಮ ಕುಶಲತೆಗಳನ್ನು ಸಿದ್ಧಿಸಿಕೊಳ್ಳಲು ಮುಂದಾಗಿ. ವ್ಯಾಪಾರಸ್ಥರಿಗೆ ಉತ್ತಮ ಫಲಗಳು ಕಾಣಬಹುದಾಗಿದೆ. ಅತ್ಯುನ್ನತ ಯೋಜನೆಯ ಗುರಿ ನಿಮ್ಮ ಮಹತ್ವಕಾಂಕ್ಷೆಯ ವಿಷಯ ಕೂಡ ಹೌದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕುಂಭ ರಾಶಿ
ನಿಮ್ಮಲ್ಲಿ ಅಡಗಿರುವ ಪ್ರತಿಭೆಗೆ ವೇದಿಕೆ ಸಿಗುವುದು ನಿಶ್ಚಿತ. ಸ್ಥಳ ಬದಲಾವಣೆಯ ಚಿಂತನೆಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಈ ದಿನ ಕೆಲಸದ ಪ್ರಾರಂಭದಲ್ಲಿ ಕಷ್ಟಕರ ಎನಿಸಿದರು ನಂತರ ಸರಾಗವಾಗಿ ನಡೆಯಲಿದೆ. ಸಂಬಂಧಿಕರೊಡನೆ ಮನಸ್ತಾಪ ವಾಗುವ ಕೆಲವು ಸಂಗತಿಗಳು ನಡೆಯಬಹುದು ಆದಷ್ಟು ಎಚ್ಚರವಹಿಸಿ. ದಾಖಲೆಗಳನ್ನು ಜತನವಾಗಿ ಕಾಪಾಡಿಕೊಳ್ಳುವುದು ಬಹುಮುಖ್ಯ. ಮಕ್ಕಳೊಡನೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ದಾಂಪತ್ಯ ಜೀವನದಲ್ಲಿ ಸಂತೃಪ್ತಿಯ ಭಾವನೆ ಮೂಡಲಿದೆ. ಕುಟುಂಬಸ್ಥರ ಆರೋಗ್ಯ ಬಗ್ಗೆ ಆದಷ್ಟು ಕಾಳಜಿ ವಹಿಸಿ. ಹಣಕಾಸಿನ ವ್ಯವಹಾರದಲ್ಲಿ ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು ಇನ್ನೊಮ್ಮೆ ಪರಿಶೀಲಿಸುವುದು ಸೂಕ್ತ. ಸಂಗೀತ ಹಾಡುಗಾರಿಕೆಯಲ್ಲಿ ಆಸಕ್ತಿ ಮೂಡಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು. ಕೊಟ್ಟಿರುವ ಸಾಲಗಳು ಮರುಪಾವತಿಯಾಗದೇ ವಿಳಂಬವಾಗುವ ಸಾಧ್ಯತೆಯಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಗಳಿಗೆ ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button