ಶಹಾಪುರಃ ಶೆಟರ್ ಮುರಿದು ಸರಣಿ ಅಂಗಡಿ ಕಳ್ಳತನ, ಗೋಶಾಲೆ ದೇಣಿಗೆ ಸಂಗ್ರಹ ಹಣ ಕದ್ದೊಯ್ದ ಖದೀಮ
ಆಶೀರ್ವಾದ ಮೆಡಿಕಲ್ ನಲ್ಲಿದ್ದ 30 ಸಾವಿರ ಕದ್ದೊಯ್ದ ಖದೀಮ

ಶಹಾಪುರಃ ಶೆಟರ್ ಮುರಿದು ಸರಣಿ ಅಂಗಡಿ ಕಳ್ಳತನ, ಕಳ್ಳನಿಗೆ ನಿರಾಸೆ
ಆಶೀರ್ವಾದ ಮೆಡಿಕಲ್ ನಲ್ಲಿದ್ದ 30 ಸಾವಿರ ಕದ್ದೊಯ್ದ ಖದೀಮ
ಶಹಾಪುರಃ ನಗರದಲ್ಲಿ ಕಳೆದ 6 ತಿಂಗಳಿನಿಂದ ಸರಣಿ ಕಳ್ಳತನವಾಗುತ್ತಿದ್ದು, ನಿನ್ನೆ ರಾತ್ರಿ ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪ ಎದುರಿನ ಕಂಠೋಜಿ ಕಾಂಪ್ಲೆಕ್ಸ್ ನಲ್ಲಿರುವ ಆಶೀರ್ವಾದ ಮೆಡಿಕಲ್ ಸೆಟರ್ ಮುರಿದ ಖದೀಮ ಅಂಗಡಿಯಲ್ಲಿದ್ದ ಅಂದಾಜು 30 ಸಾವಿರ ರೂ. ಒಯ್ದಿದ್ದಾನೆ. ಅಲ್ಲದೆ ಅಂಗಡಿಯಲ್ಲಿದ್ದ ಗೋಶಾಲಾ ಡಬ್ಬಿಯಲ್ಲಿ ಸಂಗ್ರಹವಾದ ಹಣವು ಲಪಾಟಿಯಿಸಿದ್ದಾನೆ ಎಂದು ಅಂಗಡಿ ಮಾಲೀಕರು ವಿನಯವಾಣಿಗೆ ತಿಳಿಸಿದ್ದಾರೆ.
ಅಲ್ಲದೆ ಸಿಬಿ ಕಮಾನ ಹತ್ತಿರದ ಚಟ್ಟಿ ಕಾಂಪ್ಲೆಕ್ಸ್ ನಲ್ಲಿರುವ ಭಾಗ್ಯ ಏಜೆನ್ಸಿ ಅಂಗಡಿಯಲ್ಲೀ ಕಳ್ಳತನ ನಡೆಸಿದ್ದ ಅಷ್ಟೊಂದು ದುಡ್ಡೇನು ಹೋಗಿರುವದಿಲ್ಲ. ಚಿಲ್ಲರೆ ದುಡ್ಡು ಮಾತ್ರ ಕದ್ದೊಯ್ದಿದ್ದಾನೆ. ಈ ಮೊದಲೊಮ್ಮೆ ಭಾಗ್ಯ ಎಜೆನ್ಸಿ ಶೆಟರ್ ಮುರೊದು ಒಂದುವರೆ ಲಕ್ಷ ಕದಿಯಲಾಗಿತ್ತೆಂದು ಮಾಲೀಕರು ತಿಳಿಸಿದ್ದಾರೆ. ಇದು ಎರಡನೇ ಬಾರಿ ಗಡಿ ಕಳುವಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ಕಳ್ಳನನ್ನು ಸೆರೆ ಹಿಡಿಯಬೇಕಿದೆ ಎಂದು ಮಾಲೀಕ ಬಾಬುಗೌಡ ಕರಕಳ್ಳಿ ಅವರು ಮನವಿ ಮಾಡಿದ್ದಾರೆ.
ಅದೇ ರೀತಿ ಕಮಾನ ಹತ್ತಿರದ ಶಿವಾನಂದ ಮೆಡಿಕಲ್ ಸೇರಿದಂತೆ ನೇಹಾ ಕಂಪ್ಯೂಟರ್ ಸೆಂಟರ್ ಶೆಟರ್ ಮುರಿಯಲಾಗಿದ್ದು, ಖದೀಮರು ತಮ್ಮ ಕೈಚಳಕ ಮುಂದುವರೆಸಿದ್ದಾರೆ.
ಈ ಹಿಂದೆ ಟೆಂಗಿನಕಾಯಿ ಅಂಗಡಿ ಶೆಟರ್ ಮುರಿದು ಐದು ಲಕ್ಷ ರೂ.ಕದ್ದೊಯ್ದಿದ್ದರು. ಅದರಂತೆ ತುಂಬಗಿ ಅವರ ಗೋದಾಮು ಶೆಟರ್ ಮುರಿದು ಅಂದಾಜು 3 ಸಾವಿರ ರೂ. ತೆಗೆದುಕೊಂಡು ಹೋಗಿದ್ದರು. ಅದಾದ ನಂತರ ಬಸವೇಶ್ವರ ನಗರದಲ್ಲಿ ಎರಡು ಮೂರು ಮನೆಗಳ ಕಳ್ಳತನ ನಡೆದಿದ್ದವು.
ಹೀಗಾಗಿ ರಾತ್ರಿಹೊತ್ತು ಪೊಲೀಸರ ಗಸ್ತು ತಿರುಗಿದರೂ ಅವರ ಕಣ್ಣಿಗೆ ಮಣ್ಣೆರೆಚುವ ಇಂತಹ ಕೃತ್ಯಗಳು ನಡೆಯಿತ್ತಿವೆ. ಕಾರಣ ಈ ಕೂಡಲೇ ಪೊಲೀಸರು ಕಳ್ಳರ ಪತ್ತೆ ಹಚ್ಚುವ ಚುರುಕು ಕಾರ್ಯ ಕೈಗೊಳ್ಳಬೇಕಿದೆ ಎಂದು ನೊಂದ ಅಂಗಡಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕಳುವಾದ ಅಂಗಡಿಗಳಿಗೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಡೆಸಿದ್ದಾರೆ.