ಪ್ರಮುಖ ಸುದ್ದಿ

ಕಟ್ಟಡ ನಿರ್ಮಾಣಕ್ಕೆ ಗಿಡಗಳು ಅಡ್ಡಿಯಾಗಲ್ಲ – ಅಧ್ಯಕ್ಷ ಶಾಂತಗೌಡ ಸ್ಪಷ್ಟನೆ

ನ್ಯಾಯಧೀಶರಿಂದಲೂ ಸ್ಥಳ ಪರಿಶೀಲನೆ ನಡೆದಿದೆ - ಶಾಂತಗೌಡ ಹಾಲಭಾವಿ

ನ್ಯಾಯಧೀಶರಿಂದಲೂ ಸ್ಥಳ ಪರಿಶೀಲನೆ ನಡೆದಿದೆ – ಶಾಂತಗೌಡ ಹಾಲಭಾವಿ

ಕಟ್ಟಡ ನಿರ್ಮಾಣಕ್ಕೆ ಗಿಡಗಳು ಅಡ್ಡಿಯಾಗಲ್ಲ – ಅಧ್ಯಕ್ಷ ಸ್ಪಷ್ಟನೆ

yadgiri, ಶಹಾಪುರಃ ನ್ಯಾಯಾಲಯದ ಆವರಣದಲ್ಲಿ ಹೊಸದಾಗಿ ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ ಕೆಲವರು ತಕರಾರು ಎತ್ತಿದ್ದು, ಸಂಘದ ಗಮನಕ್ಕೆ ತರದೆ ಪತ್ರಿಕಾ ಪ್ರಕಟಣೆ ನೀಡಿರುವದು ಸರಿಯಲ್ಲ. ಪ್ರಸ್ತುತ ನಿರ್ಧರಿಸಲಾಗಿದ್ದ ಸ್ಥಳದ ಬಗ್ಗೆ ತಕರಾರಿದ್ದರೆ ತಮ್ಮ ಅನಿಸಿಕೆಯನ್ನು ಸಂಘದ ಗಮನಕ್ಕೆ ತರಬೇಕಿತ್ತು. ಆ ಕುರಿತು ಮರು ಪರಿಶೀಲಿಸಿ ಬೇರಡೆ ಸ್ಥಳವೇ ಸೂಕ್ತ ವೆನಿಸಿದಲ್ಲಿ ಹಿರಿಯರ ಮುಂದೆ ವಿಷಯ ಪ್ರಸ್ತಾಪಿಸಿ ಸ್ಥಳ ಪರಿಶೀಲಿಸಿ ಅದನ್ನೆ ಆಯ್ಕೆ ಮಾಡಲು ಸಿದ್ಧ ಎಂದು ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ ಹಾಲಭಾವಿ ತಿಳಿಸಿದರು.

ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಪ್ರಸ್ತಾಪಿಸ ಬೇಕಾದ ವಿಷಯವನ್ನು ಪತ್ರಿಕೆಯಲ್ಲಿ ಪ್ರಕಟಿಸಿರುವದು ತೀವ್ರ ನೋವುಂಟು ಮಾಡಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಕ್ರೀಯಾ ಯೋಜನೆ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅಲ್ಲದೆ ಈ ಮೊದಲೇ ವಕೀಲರ ಸಭೆಯಲ್ಲಿ ಸರ್ವಾನುಮತದಿಂದ ನ್ಯಾಯಾಲಯದ ಬಲ ಭಾಗ ಪ್ರಸ್ತುತ ಹೊಟೇಲ್‍ಗಳು ಇರುವ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅಲ್ಲದೆ ಸ್ಥಳೀಯ ನ್ಯಾಯಾಲಯಗಳ ನ್ಯಾಯಾಧೀಶರು ಸೇರಿದಂತೆ ಜಿಲ್ಲಾ ನ್ಯಾಯಾಧೀಶರು ಮತ್ತು ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಸಹ ಸ್ಥಳವನ್ನು ಪರಿಶೀಲಿಸಿದ್ದಾರೆ. ಆಗಲೇ ಸ್ಥಳ ಆಯ್ಕೆಗೊಳಿಸಿ ಪ್ರಸ್ತಾವನೆ ಸಲ್ಲಿಸಿಯಾಗಿದೆ ಎಂದರು.

ಸಂಘದ ಕಾರ್ಯದರ್ಶಿ ಶರಣು ಸಜ್ಜನ್ ಮಾತನಾಡಿ, ಮೊದಲೇ ಆಯ್ಕೆಗೊಳಿಸಿದ ಸ್ಥಳದಲ್ಲಿಯೇ ಕಟ್ಟಡ ನಿರ್ಮಿಸಿದಲ್ಲಿ, ನ್ಯಾಯಾಲಯದ ಕಲಾಪ ನಡೆಯುವಾಗ ಹಿರಿಯ ನ್ಯಾಯವಾದಿಗಳಿಗೆ ಕಲಾಪದಲ್ಲಿ ಹಾಜರಾಗಲೂ ಅನುಕೂಲವಾಗಲಿದೆ. ಅಲ್ಲದೆ ಈ ಮೊದಲೇ ಆಯ್ಕೆಗೊಳಿಸಿದ ಸ್ಥಳದಲ್ಲಿ ಯಾವುದೇ ಗಿಡಗಳು ಇಲ್ಲ. ಗಿಡಗಳು ಕಡಿಯುವ ಸ್ಥಿತಿ ಬರಲ್ಲ. ಅದು ಖಾಲಿ ಜಾಗ ಇದೆ. ಅಲ್ಲದೆ ಎಲ್ಲಾ ನ್ಯಾಯಾಧೀಶರೂ ಈ ಸ್ಥಳವನ್ನು ಪರಿಶೀಲಿಸಿ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನು ಬದಲಾಯಿಸುವದು ಕಷ್ಟದ ಕೆಲಸ ಎಂದರು. ಈ ಸಂದರ್ಭದಲ್ಲಿ ವಕೀಲರಾದ ಎಚ್.ಎಂ.ಹೊಸಮನಿ, ನಾಜೀಮಾ ಬೇಗಂ ಉಪಸ್ಥಿತರಿದ್ದರು.

 

ತಕರಾರೇನು.?

ಶಹಾಪುರಃ ವಕೀಲರ ಸಂಘದ ಒಂದು ಬಣ ಪ್ರಸ್ತುತ ನ್ಯಾಯಾಲಯದ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕಾರಣ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ ಸ್ಥಳದಲ್ಲಿ ಸಾಕಷ್ಟು ಗಿಡ ಮರಗಳಿದ್ದು, ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ. ಗಿಡಗಳು ಬೃಹದಾಕರವಾಗಿ ಬೆಳೆದು ನಿಂತಿವೆ. ಅನಗತ್ಯವಾಗಿ ಇವುಗಳನ್ನು ಕಡಿಯುವದು ಸರಿಯಲ್ಲ ಎಂದು ವಕೀಲರಾದ ಆರ್.ಚನ್ನಬಸು, ಸಂತೋಷ ದೇಶಮುಖ, ಶರಬಣ್ಣ ಅಮ್ಮನೂರ, ಉಮೇಶ ಮುಡಬೂಳ, ಶರಣು ಪ್ಯಾಟಿ, ವಿಶ್ವನಾಥ ಫಿರಂಗಿ, ದೇವರಾಜ ಚಟ್ಟಿ, ಪಿ.ಎನ್.ಜಮಖಂಡಿ, ಚಂದ್ರಶೇಖರ ಹಾದಿಮನಿ, ಹನುಮಂತ ಬೇಟೆಗಾರ, ನಿಂಗಪ್ಪ ಘೋಷಿ, ಮರೆಪ್ಪ ಹೊಸಮನಿ, ಜಯಲಕ್ಷ್ಮೀ ಬಸರಡ್ಡಿ ಇತರರಿಂದ ವಿರೋಧ ವ್ಯಕ್ತವಾಗಿದೆ.

ಪ್ರಕಟಣೆಯಲ್ಲಿ ತಿಳಿಸಿರುವ ಇವರು, ನ್ಯಾಯಾಲಯದ ಮುಂಭಾಗದಲ್ಲಿ ಖಾಲಿ ಜಾಗವಿದೆ. ಅಲ್ಲಿ ಕಟ್ಟಡ ನಿರ್ಮಾಣ ಮಾಡಿದಲ್ಲಿ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿಲ್ಲಾ ನ್ಯಾಯಧೀಶರಿಗೆ ಈ ಬಣ ಮನವಿ ಪತ್ರ ನೀಡಿ ಒತ್ತಾಯಿಸಿದೆ.

 

Related Articles

Leave a Reply

Your email address will not be published. Required fields are marked *

Back to top button