ವಿಷ್ಣು ಸ್ಮಾರಕಃ ಅಭಿಮಾನಿಗಳಿಂದ ಹೋರಾಟಕ್ಕೆ ಸಿದ್ಧ
ಡಿ.17 ರಂದು ಬೆಂಗಳೂರಿಗೆ ಅಭಿಮಾನಿಗಳ ದಂಡು
yadgiri, ಶಹಾಪುರಃ ಕನ್ನಡದ ಮೇರು ನಟ ಡಾ.ವಿಷ್ಣುರ್ವನ ಅವರ ಪುಣ್ಯ ಭೂಮಿ, ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದೇ ಡಿ.17 ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‍ನಲ್ಲಿ ವಿಷ್ಣು ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಆ ಪ್ರತಿಭಟನೆಯಲ್ಲಿ ಭಾಗವಹಿಸಲು ಜಿಲ್ಲೆಯಿಂದ ನೂರಾರು ಅಭಿಮಾನಿಗಳು ತೆರಳಲಿದ್ದೇವೆ ಎಂದು ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ರವಿಕುಮಾರ ದೇವರಮನಿ ತಿಳಿಸಿದರು.
ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಕರೆದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಹಾಪುರ, ಸುರಪುರ ಸೇರಿದಂತೆ ಜಿಲ್ಲೆಯಿಂದ ಸಾವಿರಾರು ಜನ ಅವರ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ.
ವಿಷ್ಣುವರ್ಧನ ಅವರ ಪುಣ್ಯಭೂಮಿ ಮತ್ತು ಸ್ಮಾರಕಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿದೆ. ನಿಷ್ಕಲ್ಮಷ ಮನಸ್ಸಿನ ಕನ್ನಡ ಮೇರು ನಟ ವಿಷ್ಣುದಾದಾಗೆ ಅಗೌರವ ನೀಡುವದು ತರವಲ್ಲ. ಈ ಕೂಡಲೇ ಸಿಎಂ ಅವರು ಸೂಕ್ತ ನಿರ್ಧಾರಕೈಗೊಂಡು ಅವರ ಸಮಾಧಿ ಸ್ಥಳ ಅಭಿಮಾನ್ ಸ್ಟುಡಿಯೋದಲ್ಲಿಯೇ ಪುಣ್ಯ ಭೂಮಿ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ನಿರಂತರ ಹೋರಾಟ ಮುಂದುವರೆಯಲಿವೆ ಎಂದು ಅವರು ತಿಳಿಸಿದರು.
ಗೌರವ ಅಧ್ಯಕ್ಷ ಸೋಮನಗೌಡ ಗುರುವಿನ ಮಾತನಾಡಿದರು. ತಾಲೂಕು ವಿಷ್ಣು ಸೇವಾ ಸಮಿತಿ ಅಧ್ಯಕ್ಷ ಉದಯಕುಮಾರ ನಾಗನಟಿಗಿ ಅಧ್ಯಕ್ಷತೆವಹಿಸಿದ್ದರು. ಕಾಳಪ್ಪ ಶಹಾಪುರ, ದೇವಿಂದ್ರಪ್ಪ ಮೇಟಿ, ಮಹಾದೇವಪ್ಪ ಮೇಟಿ, ಮಾಳಪ್ಪ ಹುಲ್ಕಲ್, ಶಿವಕುಮಾರ ಮಡಿವಾಳ, ನಾಗು ಗುತ್ತಿಪೇಠ, ಧರ್ಮರಾಜ ಹೋತಪೇಟ, ಮಲ್ಲು ಗುಡನೂರ, ಲಕ್ಷ್ಮೀಕಾಂತ, ಶಿವು ಹೊಸಮನಿ ಇತರರು ಭಾಗವಹಿಸಿದ್ದರು.