ವಿವೇಕ್ ನೀಟ್ ಅಧ್ಯಯನ ಅತ್ಯುತ್ತಮ ಸಾಧನೆ – ಹರ್ಷ
NEET ನಲ್ಲಿ ವಿವೇಕರಾಜ್ ದಂಡು ಅತ್ಯುತ್ತಮ ಸಾಧನೆ
NEET ನಲ್ಲಿ ವಿವೇಕರಾಜ್ ದಂಡು ಅತ್ಯುತ್ತಮ ಸಾಧನೆ
ವಿವೇಕ್ ನೀಟ್ ಅಧ್ಯಯನ ಅತ್ಯುತ್ತಮ ಸಾಧನೆ – ಹರ್ಷ
ಯಾದಗಿರಿ, ಶಹಾಪುರಃ ಇಲ್ಲಿನ ಜೀವ್ಹೇಶ್ವರ ನಗರ ನಿವಾಸಿ ಉದ್ಯಮಿ ಮುರುಳಿಧರ ದಂಡು ಇವರ ಸುಪುತ್ರ ವಿದ್ಯಾರ್ಥಿ ವಿವೇಕರಾಜ್ ಎಂ.ದಂಡು ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 677 ಅಂಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲ 977 ನೇ ರ್ಯಾಂಕ್ ಪಡೆದಿದ್ದಾನೆ.
ಅಲ್ಲದೆ ಓದುತ್ತಿರುವ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನಲ್ಲಿ 5 ನೇ ರ್ಯಾಂಕ್ ಪಡೆದಿರುತ್ತಾನೆ.
ಈ ಹಿನ್ನೆಲೆ ಯಲ್ಲಿ ವಿವೇಕರಾಜ್ ನ ಪಾಲಕರ ಸ್ನೇಹಿತರು ಮನೆಗೆ ತೆರಳಿ ವಿದ್ಯಾರ್ಥಿ ವಿವೇಕರಾಜ್ ಗೆ ಸನ್ಮಾನಿಸಿ ಗೌರವಿಸುವ ಮೂಲಕ ಶುಭ ಕೋರಿದ್ದಾರೆ.
ಈ ಸಂದರ್ಭದಲ್ಲಿ ರಾಜಶೇಖರ ಗಂಧದಮಠ, ಚಂದ್ರಶೇಖರ ಕೊಲ್ಲೂರ, ಶರಣು ಪಾಲ್ಕಿ, ಮಲ್ಲಿಕಾರ್ಜುನ ಜವಳಿ, ಅಶೋಕ ಪಟ್ಟಣಶೆಟ್ಟಿ, ಲಿಂಗನಗೌಡ ಯಡ್ರಾಮಿ, ಗಿರೀಶ ಆರ್.ಐ, ಹರ್ಷ ವ್ಯಕ್ತಪಡಿಸಿದ್ದಾರೆ.
ಬಡವರಿರಲಿ, ಶ್ರೀಮಂತರಿರಲಿ ವಿದ್ಯೆ ಯಾರದು ಸ್ವತ್ತಲ್ಲ. ವಿದ್ಯಾರ್ಥಿಯ ನಿರಂತರ ಶ್ರಮವೇ ವಿದ್ಯೆ ಒಲಿಯಲು ಸಾಧ್ಯವಿದೆ ಎಂಬುದಕ್ಕೆ ವಿವೇಕರಾಜ್ ಸಾಕ್ಷಿ. ನಿರಂತರ ಅಧ್ಯಯನ, ಗುರುಗಳ, ಪಾಲಕರ ಮಾರ್ಗದರ್ಶನದಿಂದ ವಿದ್ಯಾಭ್ಯಾಸ ಮಾಡಿದ್ದಲ್ಲಿ ಸಾಧನೆಯ ಶಿಖರ ಏರಲು ಸರಳವಾಗಲಿದೆ.
– ಸುಧೀರ ಚಿಂಚೋಳಿ. ಮುಖಂಡರು. ಶಹಾಪುರ.