ಕಾವ್ಯ
ಭಕ್ತಿಯ ಸೆಲೆ “ವಿಶ್ವ ವಿವೇಕ” ಮಹಾನಂದ ಕಾವ್ಯ ಬರಹ
ವಿಶ್ವ ಮಾನವ
ಜ್ಞಾನದಾ ಅರಿವನ್ನು
ಭಕ್ತಿಯ ಸೆಲೆಯಿಂದ
ಮಾನವೀಯ ಮೌಲ್ಯವ
ಆಧ್ಯಾತ್ಮದಿಂದ ಬೆಳೆಗಿದ
ದಿವ್ಯಜ್ಯೋತಿ ಸ್ವಾಮಿ ವಿವೇಕಾನಂದ.
ಭೋಗಭಾಗ್ಯವನ್ನೆಲ್ಲ ತೊರೆದು
ಧ್ಯಾನ ಯೋಗದಲ್ಲಿ ಬೆರೆತು
ಸತ್ಯ ಜೀವನದ ಅರ್ಥವ ತಿಳಿಸಿ
ಕರುಣೆಯ ಕಡಲಾಗಿ ಜಗತ್ತನ್ನೆ ಪ್ರೀತಿಸಿದ
ಮಹಾಯೋಗಿ ಸ್ವಾಮಿ ವಿವೇಕಾನಂದ
||ಪ||
ಸನಾತನ ಸಂಸ್ಕೃತಿಯ ಕಲೆಯನ್ನು
ಧರ್ಮ ಅಲೆಯಿಂದ
ಮನುಷ್ಯತ್ವದ ಬೆಲೆಯನ್ನು
ದೈವತ್ವದ ಶಿಲೆಯಿಂದ ಕೆತ್ತಿದ
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ||ಪ||
ಮೇಲು ಕೀಳೆಂಬುದೇ ಅಂಧಕಾರ
ಮಮತೆಯೇ ಮಾನವನ ಕುಲವೆಂದ ಹರಿಕಾರ
ಶಿಕ್ಷಣವೇ ಆತ್ಮಶ್ರಧ್ದೆಯ ಬ್ರಹ್ಮಜ್ಞಾನವೆಂದು
ನವಭಾರತದ ಕನಸುಕಂಡವರು
ಯುಗದ ಪ್ರವರ್ತಕ ಸ್ವಾಮಿ ವಿವೇಕಾನಂದ ||ಪ||
ಸರ್ವರಲ್ಲೂ ದೇಶಾಭಿಮಾನದ ಪ್ರೀತಿ ಮೂಡಿಸಿ
ಯುವಶಕ್ತಿಗೆ ಗುರಿಸಾಧನೆಯ ಮಂತ್ರವ ತಿಳಿಸಿ
ಆತ್ಮಜಾಗೃತಿಯ ಕಹಳೆ ಮೊಳಗಿಸಿ
ವಿಶ್ವಕ್ಕೆ ಸಹೋದರತ್ವದ ಸಂದೇಶ ಸಾರಿದ
ವಿಶ್ವಮಾನವ ಸ್ವಾಮಿ ವಿವೇಕಾನಂದ ||ಪ||
–ಮಹಾನಂದ.ಆರ್.ತಳವಾರ.
ಬಾಪೂಗೌಡ ನಗರ .ಶಹಾಪೂರ