ಪ್ರಮುಖ ಸುದ್ದಿ
BREAKING – VRL ಬಸ್ ಪಲ್ಟಿ- ದೊಡ್ಡ ಅನಾಹುತ, ಹಲವರಿಗೆ ಗಾಯ
ಓರ್ವ ಪ್ರಯಾಣಿಕರು ಬಸ್ ನಡಿ ಸಿಲುಕಿರುವ ಸಾಧ್ಯತೆ

BREAKING – VRL ಬಸ್ ಪಲ್ಟಿ- ದೊಡ್ಡ ಅನಾಹುತ, ಪ್ರಯಾಣಿಕರು ಸಿಲುಕಿರುವ ಸಾಧ್ಯತೆ
ಓರ್ವ ಪ್ರಯಾಣಿಕರು ಬಸ್ ನಡಿ ಸಿಲುಕಿರುವ ಸಾಧ್ಯತೆ
Yadgiri, ಶಹಾಪುರಃ ತಾಲೂಕಿನ ಹತ್ತಿಗೂಡೂರ ಬಳಿ ಸುರಪುರ ರಸ್ತೆಯ ಸೇತುವೆ ಬಳಿ ಬೆಂಗಳೂರಿಗೆ ಹೊರಟಿದ್ದ VRL ಬಸ್ ಪಲ್ಟಿಯಾಗಿ ನೆಲಕ್ಕೆ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಬಸ್ ಹಿಂಬದಿಯ ಗ್ಲಾಸ್ ಹೊಡೆದು ಜನರನ್ನು ರಕ್ಷಣೆ ಮಾಡಿದ್ದಾರೆ. ಹಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆಂದು ಸಮಿಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಸ್ ಬಿದ್ದು ಅರ್ಧಗಂಟೆಯಾದರೂ ಸ್ಥಳಕ್ಕೆ ಬಾರದ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಸ್ ನಡಿ ಇನ್ನೂ ಪ್ರಯಾಣಿಕರು ಸಿಲುಕಿರುವ ಸಾಧ್ಯತೆ ಇದೆ ಎಂದು ಜನರು ಮಾಹಿತಿ ನೀಡಿದ್ದಾರೆ.
ಮಳೆ ಬೇರೆ ಆಗುತ್ತಿದ್ದು, ಗಾಯಗೊಂಡ ಪ್ರಯಾಣಿಕರನ್ನು ಕರೆದೊಯ್ಯಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಪರದಾಡುವ ಸ್ಥಿತಿ ಕಂಡು ಬಂದಿತು.