ಪ್ರಮುಖ ಸುದ್ದಿ
ನಾಗರ ಕೆರೆಯಲ್ಲಿ ಅಪರಿಚಿತ ಶವ ಪತ್ತೆ
ಶಹಾಪುರದಲ್ಲಿ ಅಪರಿಚಿತ ಶವ ಪತ್ತೆ
ಶಹಾಪುರಃ ನಗರದ ನಾಗರ ಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಯುವಕನ ವಯಸ್ಸು ಅಂದಾಜು 25-30 ಎಂದು ಹೇಳಲಾಗುತ್ತಿದ್ದು, ಚಕ್ಸ್ ಕಲರ್ ಶರ್ಟ್ ಮತ್ತು ಡಾರ್ಕ್ ಪ್ಯಾಂಟ್ ಧರಿಸಿದ್ದಿ ಇನ್ ಶರ್ಟ್ ಮಾಡಿದ್ದಾನೆ ಎನ್ನಲಾಗಿದೆ.
ಶವ ಗುರುತು ಸಿಗದ ಕಾರಣ ಪೊಲೀಸರ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.
ಸಂಬಂಧಿಕರು, ಗುರುತಿಸುವವರಿದ್ದರೆ ಆಸ್ಪತ್ರೆಗೆ ಭೇಟಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ಕೈಗೊಂಡಿದ್ದಾರೆ.
ಇದು ಆತ್ಮಹತ್ಯ ಅಲ್ಲ ಕೊಲೆ ಇರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಈ ಕುರಿತು ಯಾವುದೇ ಗುಟ್ಟು ಬಿಟ್ಟು ಕೊಡದೆ ತನಿಖೆ ಮುಂದುವರೆಸಿದ್ದಾರೆ.