ವಿನಯ ವಿಶೇಷ

ಫಿಟ್ಇಂಡಿಯಾ ಮೂವ್ಮೆಂಟ್ : ಪ್ರಧಾನಿ ಮೋದಿ, ನಟಿ ಶಿಲ್ಪಾ ಶೆಟ್ಟಿ ಹೇಳಿದ್ದೇನು?

ದೆಹಲಿ: ನಗರದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಇಂದು ಫಿಟ್ ಇಂಡಿಯಾ ಮೂವ್ ಮೆಂಟ್ ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವು ಚಾಲನೆ ನೀಡಿದರು. ಕ್ರೀಡೆ ಫಿಟ್ ನೆಸ್ ಗೆ ಸಂಬಂಧಿಸಿದ್ದಾಗಿದ್ದು  ಆರೋಗ್ಯ ಮತ್ತು ಆನಂದದ ಜೀವನಕ್ಕೆ ಅಗತ್ಯವಾಗಿದೆ.  ಆಧುನಿಕ ಜೀವನಶೈಲಿಯಿಂದ ಎದುರಾಗಬಹುದಾದ ತೊಂದರೆ ನಿವಾರಣೆಗೆ ಫಿಟ್ ನೆಸ್ ಮೂವ್ ಮೆಂಟ್ ಸಹಕಾರಿ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ‘ಫಿಟ್ ಇಂಡಿಯಾ ಚಳವಳಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಶಿಲ್ಪಾ ಅವರನ್ನು ಕ್ರೀಡಾ ಸಚಿವ ಕಿರಣ್ ರಿಜಿಜು ಅಭಿನಂದಿಸಿದ್ದಾರೆ. ಸಚಿವ ರಿಜಿಜು ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಶಿಲ್ಪಾ ಶೆಟ್ಟಿ ಅವರು ಫಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ.  ಶೀಘ್ರಗತಿಯಲ್ಲಿ ಭಾರತದ ಫಿಟ್ ನೆಸ್ ಕನಸು ನನಸಾಗಲಿ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button