ಪ್ರಮುಖ ಸುದ್ದಿ
ಯಾದಗಿರಿಃ ನಿಲ್ಲದ ಕೊರೊನಾಘಾತ, ನಾಲ್ವರಿಗೆ ಪಾಸಿಟಿವ್
ಯಾದಗಿರಿಃ ಮತ್ತೆ 4 ಜನರಿಗೆ ಕೊರೊನಾ ಪಾಸಿಟಿವ್
ಯಾದಗಿರಿಃ ಶುಕ್ರವಾರ ಮತ್ತೆ ಜಿಲ್ಲೆಯಲ್ಲಿ 4 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 877 ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ 489 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಬ್ಬರು ಮೃತಪಟ್ಟಿರುತ್ತಾರೆ.
ಇದುವರೆಗೂ ಜಿಲ್ಲೆಯಲ್ಲಿ 20,402 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 835 ಮಾದರಿಗಳ ಸೇರಿದಂತೆ 1757 ಮಾದರಿಗಳ ವರದಿ ಇನ್ನೂ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ರಿ.ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುರಪುರ ತಾಲೂಕಿನ ದಿವಳಗುಡ್ಡದ 27 ವಷದ ಮಹಿಳೆ (ಪಿ-8227), ದಿವಳಗುಡ್ಡದ 31 ವಷದ ಪುರುಷ (ಪಿ-8228), ಯಾದಗಿರಿ ತಾಲೂಕಿನ ಲಿಂಗೇರಿ 78 ವಷದ ಮಹಿಳೆ(ಪಿ-8229), ತಾಲೂಕಿನ ಅಲಿಪುರ ಗ್ರಾಮದ 32 ವಷದ ಮಹಿಳೆ (ಪಿ-8229) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.