ಕಾವ್ಯ
ಕವಿ ನಿಸರ್ಗತನಯ ರಚಿತ ಕೊರೊನಾ ಜಾಗೃತಿ ಗೀತೆ
ಕೊರೊನ ಜಾಗೃತಿ ಗೀತೆ
(ಶುಭಮಂಗಳ ಚಿತ್ರದ ಹಾಡಿನ ಧಾಟಿ)
ಲಾಕ್ಡೌನು ಸೀಲ್ಡೌನು ಎಲ್ಲಾನು ಮುಗೀತು
ಕಂಟ್ರೋಲ್ಗೆ ಬರಲಿಲ್ಲ ಕೊರೊನಾ |2|
ಹಿಂಗೇನೆ ಆದರೆ ಮುಂದೇನು ಗತಿಯೋ
ಈಗ್ಲಾದ್ರೂ ಎಚ್ಚೆತ್ತು ಕೊಳ್ಳೋಣ |2||ಪ|
ಮಾಸ್ಕನ್ನು ಧರಿಸೋಣ ಮರೆಯಾದೆ ನಾವು
ದೈಹಿಕ ಅಂತರ ಅನುಸರಿಸಬೇಕು
ಸ್ಯಾನಿಟೈಸರ್ ಬಳಸೋಣ ತಪ್ಪದೆ ನಾವು
ಈಗಿರುವ ದಾರಿ ಇದೊಂದೆ ಕೇಳು
ಇದೊಂದೆ ಕೇಳು|2||ಪ||
ಆಸ್ಪತ್ರೆಗಳ ತುಂಬ ಸೋಂಕಿತರ ದಂಡು
ಜಾಗಾನು ಸಿಗುತಿಲ್ಲ ಹೂಳೋಕು ನೋಡು
ಡಾಕ್ಟರ್ ಗು ನರ್ಸಿಗೂ ಕರೊನ ಬಿಡದೂ
ಸಾಮನ್ಯ ಜನರನ್ನು ಬಿಟ್ಟಿತೆ ಹೇಳು
ಬಿಟ್ಟೀತೆ ಹೇಳು|2||ಪ||
ಸರ್ಕಾರ ಹೇಳ್ದಂಗೆ ಕೇಳೋಣ ನಾವೂ
ಇಲ್ದಿದ್ರೆ ಬರುತೈತೆ ನಮ್ಮನೆಗೆ ಸಾವು
ಇನ್ನಾದ್ರೂ ಎಚ್ಚೆತ್ತು ಹುಷಾರಾಗಿರೋಣ
ನಮ್ಮ ನಮ್ಮ ಜೀವಾನ ರಕ್ಷಿಸಿಕೊಳ್ಳೋಣ
ರಕ್ಷಿಸಿಕೊಳೋಣ|2||ಪ||
–ದೇವರಾಜ್ ನಿಸರ್ಗತನಯ
ಬಂಗಾರಪೇಟೆ.