ಪ್ರಮುಖ ಸುದ್ದಿ

ಶಹಾಪುರಃ ಕೊರೊನಾಗೆ ಇಬ್ಬರು ಬಲಿ.!

ಶಹಾಪುರಃ ಕೊರೊನಾ ಮರಣ ಮೃದಂಗ ಆರಂಭ

ಕೊರೊನಾ ದೃಢವಿದ್ದ ಇಬ್ಬರ ಸಾವು

ಯಾದಗಿರಿಃ ಶಹಾಪುರ ಪಟ್ಟಣದ ವಿದ್ಯಾನಗರ ನಿವಾಸಿ 62 ವರ್ಷದ ಜುಲೈ 26 ರಂದು ಕೊರೊನಾ ದೃಢವಿದ್ದ‌ ವ್ಯಕ್ತಿ ಇಂದು ಸಾವನ್ನಪ್ಪಿದ್ದು, ಆತನಿಗೆ ಹೃದ್ರೋಗ ಸಮಸ್ಯೆಯಿಂದ ಬಳಲುತಿದ್ದ ಎನ್ನಲಾಗಿದೆ.

ಅದೇ ರೀತಿ ಶಹಾಪುರ ತಾಲೂಕಿನ ಸಗರ ಗ್ರಾಮ ಓರ್ವ ಮಹಿಳೆಗೆ ಉಸಿರಾಟ ತೊಂದರೆ ಇರುವ ಕಾರಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದ್ದು, ಶ್ವಾಸಕೋಶ ತೊಂದರೆ ಇರುವ ಹಿನ್ನೆಲೆ ಮಹಿಳೆಯನ್ನು ಯಾದಗಿರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮಾರ್ಗ ಮಧ್ಯೆ ಮಹಿಳೆ ಅಸುನೀಗಿದ್ದು, ನಂತರ ಕೋವಿಡ್-19 ಟೆಸ್ಟ್ ಮಾಡಲಾಗಿದ್ದು, ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.

ಶಹಾಪುರದಲ್ಲಿ ಒಂದೇ ದಿನ ಕೊರೊನಾ ಇಬ್ಬರ ಬಲಿ ತೆಗೆದುಕೊಂಡಿದ್ದು,‌ ಮರಣ ಮೃದಂಗ ಆರಂಭಿಸಿದೆ ಎನ್ನಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಅಥವಾ ಜಿಲ್ಲಾಡಳಿತದಿಂದ ಇಷ್ಟರಲ್ಲಿ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button