ಪ್ರಮುಖ ಸುದ್ದಿವಿನಯ ವಿಶೇಷ

ಮೋದಿ ಹೇಳಿದ್ದ ಖಡಕ್ ನಾಥ ಕೋಳಿ, ದೋನಿ ಹುಡುಕಲು ಹೊರಟರೇಕೆ.?

ಮೋದಿ‌‌ ಹೇಳಿದ ಕೋಳಿ ಹುಡಕಲು ಹೊರಟ ಧೋನಿ.?

ಈ ಕೋಳಿ ಮಾಂಸ 1 ಕೆಜಿಗೆ ಸಾವಿರ,‌1 ಮೊಟ್ಟೆಗೆ 60 ರೂ

ವಿವಿ ಡೆಸ್ಕ್ಃ ಅಂದೊಂದು‌ ದಿನ ಪ್ರಧಾನಿ ಮೋದಿಯವರು ಕೋಳಿ ಸಾಕಾಣಿಕೆ‌ ಕುರಿತು ಮಾತನಾಡಿದ್ದರು.‌ ಆ ಕೋಳಿ ಹೆಸರು ಖಡಕ್ ನಾಥ್ ,‌ ಇದರ ವಿಶೇಷತೆ ಸಾಕಾಣಿಕೆ ಆದಾಯ ಕುರಿತು ಹೇಳಿದ್ದರು.

ಮೋದಿಯವರು ಈ ಖಡಕ್ ನಾಥ್ ಕೋಳಿಗಳ ಬಗ್ಗೆ ಮಾತನಾಡಿರುವದೇ‌ ಜನ ಸಾಕಾಣಿಕೆ ಮಾಡಲಿ ಎಂಬ ಉದ್ದೇಶವು ಇರಬಹುದು.

ಜಾಹಿರಾತು

ಈ ಕೋಳಿಗಳು ವಿಶೇಷತೆ ಹೊಂದಿದ್ದು, ಅಪಾರ ಬೇಡಿಕೆ ಇದೆ. ಈ ಕೋಳಿ ಮಾಂಸ ತಿನ್ನುವದರಿಂದ ಆರೋಗ್ಯ ಸುಧಾರಣೆ ಅದರಲ್ಲೂ ಮಹಿಳೆಯರ ಮುಟ್ಟಿನ ತೊಂದರೆ ಇತರೆ ಸಾಮಾನ್ಯ ಸಮಸ್ಯೆಗಳಿಗೆ ಇದು ಉತ್ತಮ ಔಷಧಿಯಂತೆ.‌

ಅಲ್ಲದೆ ಪುರುಷರ ‌ನರದೌರ್ಬಲ್ಯಕ್ಕೂ ಇದು ರಾಮಬಾಣವಂತೆ ಹೀಗಾಗಿ‌ ಈ ಕೋಳಿ ಮಾಂಸಕ್ಕೆ ಸಾಕಷ್ಟು ಬೇಡಿಕೆ ‌ಇದೆ ಎನ್ನಲಾಗಿದೆ.

ಮೋದಿಯವರು ಕಡಕ್‌ನಾಥ‌ ಕೋಳಿ ಕುರಿತು ಮಾಹಿತಿ ನೀಡುತ್ತಿದಂತೆ ತಡ, ಕೂಲ್‌ ಇಂಡಿಯನ್ ಕ್ರಿಕೆಟ್ ಟೀಮ್ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಈ ಕಪ್ಪು ಸುಂದರಿ ಮೋದಿ ಕೋಳಿಯನ್ನು ಹುಡುಕಿಕೊಂಡು ಹೊರಟೇ ಬಿಟ್ರೂ..

ಜಾಹಿರಾತು

ಮೋದಿ ಹೇಳಿರುವ ಈ ಖಡಕ್ ನಾಥ್ ಕೋಳಿ 1 ಕೆಜಿ ಮಾಂಸಕ್ಕೆ ಸಾವಿರ‌ ರೂ.ಯಂತೆ,‌‌ ಒಂದು ತತ್ತಿಗೆ 50-60 ರೂಪಾಯಿ ಬೆಲೆ ಇದೆ.

ಕಡಕ್‌ನಾಥ್ ಕೋಳಿಗೆ ಅಪಾರ ಬೇಡಿಕೆ‌ ಇದ್ದು ವಿದೇಶಕ್ಕೆ ಜಾಸ್ತಿ ರಫ್ತಾಗುತ್ತಿದೆ. ಈ ಕಾರಕ್ಕೆ‌ ಖಡಕ್ ನಾಥ್ ಕೋಳಿಗೆ ಫುಲ್‌ ಡಿಮ್ಯಾಂಡ್ ಆಗಿದೆ.

ಆದರೆ,  ಮದ್ಯಪ್ರದೇಶ, ರಾಜಸ್ತಾನ ಮತ್ತು ಗುಜರಾತ್ ಪ್ರದೇಶದಲ್ಲಿ ‌ಮಾತ್ರ ಈ ಕೋಳಿಗಳು ದೊರೆಯಲಿವೆ. ಧೋನಿ ಮೋದಿ ಹೇಳಿದ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿದ್ದು, ಖಡಕ್ ನಾಥ್ ಕೋಳಿ ಸಾಗಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಮರ್ಪಕ ಮಾಹಿತಿ ಪಡೆದಿದ್ದು,‌ ಕಪ್ಪು ಕೋಳಿ‌ ಸಾಗಾಣಿಕೆ ಮಾಡುವ ವಿಚಾರದಲ್ಲಿರುವದಾಗಿ ಅವರು ಆಶಯ ವ್ಯಕ್ತಪಡಿಸಿದ್ದಾರೆ‌ ಎನ್ನಲಾಗಿದೆ.

ಕಪ್ಪು ಕೋಳಿ ವಿಶೇಷತೆ ಎಂದರೆ‌ ಇದರ ಮೈಯೆಲ್ಲಾ ಕಪ್ಪು ಆಗಿದ್ದಲ್ಲದೆ, ತತ್ತಿ ಸಹ ಸ್ವಲ್ಪ ಕಪ್ಪಬಣ್ಣ ಹೊಂದಿದ್ದು, ರಕ್ತ ಸಹ ಕಪ್ಪಿದೆ ಎನ್ನಲಾಗಿದೆ. ಇದರ‌ ಮಾಂಸದಲ್ಲಿ ಔಷಧಿ ಗುಣವಿದ್ದು, ವಿದೇಶಿಯರು ಇದನ್ನು ಔಷಧಿ ತಯಾರಿಕೆಗೆ ಬಳಸಲಾಗುತ್ತಿದೆ ಎನ್ನಲಾಗಿದೆ.

ಇದು ಕಪ್ಪು ಬಣ್ಣದ್ದಾಗಿರುವ ಕಾರಣ ನಮ್ಮ ದೇಶದ ಜನ ಈ ಖಡಕ್ ನಾಥ ಕೋಳಿ ಮಾಂಸ ತಿನ್ನಲು ಹಿಂಜರಿಯುತ್ತಾರೆ. ಹೀಗಾಗಿ‌ ಇದರ ಸಾಕಾಣಿಕೆ ನಮ್ಮ ದೇಶದಲ್ಲಿ ಕಡಿಮೆ‌ ಇದೆ ಎನ್ನಬಹುದು.

ಆದರೆ ಮೋದಿಯವರು ಕೊಟ್ಟ ಐಡಿಯಾ‌ ಆಗಿದ್ದರಿಂದ ಇದೀಗ ಈ ಕೋಳಿ ಬೇಡಿಕೆ ಅರಿತಿರುವ ಜನ ಖಡಕ್ ನಾಥ್ ಕೋಳಿ ಸಾಗಾಣಿಕೆಗೆ‌ ಯೋಚನೆ ಮಾಡ್ತಿದ್ದಾರೆ ಎನ್ನಲಾಗಿದೆ

ಕಡಕ್ ನಾಥ್‌‌ ಜವಾರಿ ಕೋಳಿ ಬೇಕಾದರೆ‌ ಈ ‌ಮೂರು ಕಡೆಗಳಲ್ಲಿ‌ ಮಾತ್ರ.‌ ಮಧ್ಯಪ್ರದೇಶ, ರಾಜಸ್ತಾನ, ಗುಜರಾತ. ಈ ಮೂರು ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಕ್ಕೆ ಈ ಕೋಳಿಗಳೇ ಆಧಾರ. ಈ ಕಡಕ್ ನಾಥ್  ಕೋಳಿಗಳು ವಿದೇಶಕ್ಕೆ‌ ರಫ್ತು ‌ಆಗುತ್ತವೆ. ಅಂತಹ ವಿಶೇಷತೆ ಈ ಕಪ್ಪು ಕೋಳಿ ಖಡಕ್ ನಾಥ್ ಕೋಳಿಗಳಿಗಿದೆ.

ಇದರಿಂದ‌ ಸಾಕಷ್ಟು ಆದಾಯ ವೃದ್ಧಿಸಿ ಕೊಳ್ಳಬಹುದು. ಕೃಷಿಕರು ಈ ಕೋಳಿಗಳ ಸಾಕಾಣಿಕೆ‌ ಮಾಡಬಹುದು. ಆದರೆ ಅಲ್ಲಿನ ವಾತಾವರಣ‌ ಹೊಂದಿಕೊಂಡ ಅವುಗಳು ಬೇರೆ ರಾಜ್ಯಗಳ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆಯೋ ಇಲ್ಲವೆಂಬುದನ್ನು ಪರಮಾರ್ಶಿಸಿ ಖಡಕ್ ನಾಥ್ ಕೋಳಿ ಸಾಗಾಣಿಕೆ‌ ಮಾಡಬಹುದು ಎಂಬ ಮಾಹಿತಿ ಇದೆ.

ಮಲ್ಲಿಕಾರ್ಜುನ ಮುದ್ನೂರ.

ಸಂ.ವಿನಯವಾಣಿ.

Related Articles

One Comment

Leave a Reply

Your email address will not be published. Required fields are marked *

Back to top button