Job Alert: ರೈಲ್ವೆ ಇಲಾಖೆಯಲ್ಲಿನ 1,202 ಹುದ್ದೆಗಳಿಗೆ ಐಟಿಐ ಪಾಸಾದವರು ಆನ್ಲೈನ್ ಮೂಲಕ ಇಂದೇ ಅರ್ಜಿ ಸಲ್ಲಿಸಿ
ನವದೆಹಲಿ: ಒಂದೊಳ್ಳೆ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಅದರಲ್ಲಿಯೂ ಹೆಚ್ಚಿನ ಯುವ ಜನತೆ ಸರ್ಕಾರಿ ಕೆಲಸ ಪಡೆಯಬೇಕು ಎನ್ನುವ ಆಕಾಂಕ್ಷೆ ಹೊತ್ತಿರುತ್ತಾರೆ. ಅಂತಹವರಿಗೆ ಇಲ್ಲಿದೆ ಗೋಲ್ಡನ್ ಚಾನ್ಸ್. ರೈಲ್ವೆ ಇಲಾಖೆ ಖಾಲಿ ಇರುವ ವಿವಿಧ 1,202 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಗ್ನೇಯ ರೈಲ್ವೆಯ ನೇಮಕಾತಿ ಕೋಶ (South Eastern Railway Recruitment Cell) ಖಾಲಿ ಇರುವ ಲೋಕೋ ಪೈಲಟ್ ಮತ್ತು ಟ್ರೈನ್ಸ್ ಮ್ಯಾನೇಜರ್ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಐಟಿಐ, ಪದವಿ ತೇರ್ಗಡೆಯಾದವರನ್ನು ನೇಮಿಸಿಕೊಳ್ಳುತ್ತಿದೆ (RRC SER Recruitment 2024). ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 12 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಅಸಿಸ್ಟಂಟ್ ಲೋಕೋ ಪೈಲಟ್ – 827 ಮತ್ತು ಟ್ರೈನ್ಸ್ ಮ್ಯಾನೇಜರ್ (ಗೂಡ್ಸ್ ಗಾರ್ಡ್) – 375 ಹುದ್ದೆಗಳಿವೆ. ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಜತೆಗೆ ಐಟಿಐ ಪಾಸ್ ಮಾಡಿರಬೇಕು ಅಥವಾ ಅಂಗೀಕೃತ ಸಂಸ್ಥೆಯಿಂದ ಎಂಜಿನಿಯರಿಂಗ್ನಲ್ಲಿ 3 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಇನ್ನು ಟ್ರೈನ್ಸ್ ಮ್ಯಾನೇಜರ್ (ಗೂಡ್ಸ್ ಗಾರ್ಡ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಎಂದು ಪ್ರಕಟಣೆ ತಿಳಿಸಿದೆ.
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 42 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಯಾರಿಗೂ ಅರ್ಜಿ ಶುಲ್ಕವಿಲ್ಲ.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 5,200 ರೂ. – 20,200 ರೂ. ಮಾಸಿಕ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ನೀವು ಅರ್ಜಿ ಸಲ್ಲಿಸಬೇಕಾದ ಹುದ್ದೆಯನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ (South Eastern Railway Trains Manager (Goods Guard) ಅಥವಾ South Eastern Railway Assistant Loco Pilot (ALP))
ಪುಟದ ಕೆಳಗಡೆ ಕಾಣಿಸುವ Apply Now ಬಟನ್ ಆಯ್ಕೆ ಮಾಡಿ.
ನಿಮ್ಮ ಇಮೇಲ್ ಐಡಿ, ಫೋನ್ ನಂಬರ್ ಬಳಸಿ ಹೆಸರು ನೋಂದಾಯಿಸಿ.
ರಿಜಿಸ್ಟರ್ ನಂಬರ್, ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Sumbit ಬಟನ್ ಕ್ಲಿಕ್ ಮಾಡಿ.