ಇಲ್ಲಿ ಮಿನಿ ವಿಧಾನಸೌಧಕ್ಕೆ “ತೀನ್ ಕಮಾನ್” ಅಂತಾರೆ, ಯಾಕೆ ಗೊತ್ತಾ?
ಶಹಾಪುರದ್ದು ಮಿನಿ ವಿಧಾನಸೌಧ ಅಲ್ಲ, ತೀನ್ ಕಮಾನ್..!
ತಹಸೀಲ್ ಕಚೇರಿ, ಮಿನಿ ವಿಧಾನಸೌಧ ಜನರ ಬಾಯಲ್ಲೀಗ “ತೀನ್ ಕಮಾನ್”
-ಮಲ್ಲಿಕಾರ್ಜುನ ಮುದನೂರ
ಯಾದಗಿರಿಃ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ತಾಲೂಕಿಗೊಂದು ಮಿನಿ ವಿಧಾನಸೌಧ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಜಿಲ್ಲೆಯ ಶಹಾಪುರ ನಗರದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಲಾಗಿತ್ತು. ಆದರೆ ಅದು ವಿಧಾನಸೌಧ ಮಾದರಿಯಾಗಿರದೆ ಬೇರೆ ರೀತಿಯಲ್ಲಿ ನಿರ್ಮಿಸಲಾಗಿದೆ. ಅಂದು ಮಿನಿ ವಿಧಾನಸೌಧ ಉದ್ಘಾಟನೆ ಸಮಾರಂಭಕ್ಕೆ ಅಂದಿನ ಕಂದಾಯ ಸಚಿವ ಕರುಣಾಕರರಡ್ಡಿ ಆಗಮಿಸಿದ್ದರು.
ಮಿನಿ ವಿಧಾನಸೌಧ ಅಂದ ಮೇಲೆ ಸಾಮಾನ್ಯವಾಗಿ ಎಲ್ಲಾ ಇಲಾಖೆಯ ಕಚೇರಿಗಳು ಒಂದೇ ಕಡೆ ಕಾರ್ಯನಿರ್ವಹಿಸುವಂತಿರಬೇಕು. ಆ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಮಿನಿವಿಧಾನಸೌಧ ಯೋಜನೆಯ ಉದ್ದೇಶವಾಗಿತ್ತು.
ಹೀಗಾಗಿ, ತಾಲೂಕಿಗೊಂದು ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ತಾಲೂಕಿನ ಸಮೀಪದ ಜೇವರ್ಗಿ ಮತ್ತು ಯಾದಗಿರಿ, ಸುರಪುರದಲ್ಲಿ ಮಿನಿ ವಿಧಾನಸೌಧ ಮಾದರಿಯಲ್ಲಿಿಯೇ ಕಟ್ಟಡಗಳು ನಿರ್ಮಾಣವಾಗಿವೆ.
ಆದರೆ ಶಹಾಪುರದಲ್ಲಿನ ಮಿನಿ ವಿಧಾನಸೌಧ ಕಟ್ಟಡ ಬೇರೆ ರೂಪವೇ ಪಡೆದುಕೊಂಡಿದೆ. ಇದರಲ್ಲಿ (ತಹಸೀಲ್ ಕಚೇರಿ )ಕಂದಾಯ ಇಲಾಖೆಯ ಕಚೇರಿ ಅಂದೇ ಉದ್ಘಾಟನೆ ಮಾಡಲಾಗಿತ್ತು.
ಆಗಿನ ಕಂದಾಯ ಸಚಿವ ಕರುಣಾಕರ ರಡ್ಡಿ ಉದ್ಘಾಟನೆ ವೇಳೆಯೇ ಇದು ಮಿನಿ ವಿಧಾನ ಸೌಧಾನಾ..ಎಂದು ಉದ್ಘರಿಸಿದ್ದರು. ಆಗಿನ ಸ್ಥಳೀಯ ಶಾಸಕರಾಗಿದ್ದ ಶರಣಬಸಪ್ಪ ದರ್ಶನಾಪುರ ಜೊತೆಯಲ್ಲಿಯೇ ಇದ್ದರು. ಅವರನ್ನೇ ಇದು ಮಿನಿವಿಧಾನ ಸೌಧ ಮಾದರಿಯಲ್ಲಿ ಇಲ್ಲವಲ್ಲಾ ಇದು ತುಂಬಾ ಚಿಕ್ಕದಾಗುತ್ತದೆ ಎಂದು ಅಂದೇ ಹೇಳಿದ್ದರು.
ಆದಾಗ್ಯು ಆಗಿನ ಶಾಸಕರು ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ತಹಸೀಲ್ ಕಚೇರಿಯೂ ಆರಂಭವಾಯಿತು. ಆದರೆ ಇಂದು ಈ ಕಟ್ಟಡದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೇ ಕೊಠಡಿಗಳ ಕೊರತೆ ಕಾಡುತ್ತಿದೆ. ಇನ್ನೂ ಇತರೆ ಇಲಾಖೆಗಳು ಎಲ್ಲಿಂದ ಕಾರ್ಯನಿರ್ವಹಿಸಲು ಸಾಧ್ಯ ಹೇಳಿ.?
ಹೀಗಾಗಿ ಈ ಕಟ್ಟಡಕ್ಕೆ ಮಿನಿ ವಿಧಾನಸೌಧ ಎಂದು ಹೇಗೆ ಕರೆಯಬೇಕು ಎಂಬುದೇ ಇಲ್ಲಿನ ಜನರಲ್ಲಿ ಮೂಡಿದ ಜಿಜ್ಞಾಸೆ. ಮಿನಿ ವಿಧಾನಸೌಧದ ಮಾದರಿಯಲ್ಲಿ ಈ ಕಟ್ಟಡವಂತೂ ಇಲ್ಲ. ಆ ಕಾರಣಕ್ಕೆ ಈ ಕಟ್ಟಡ ಇಂದು ಜನರ ಬಾಯಲ್ಲಿ ‘ತೀನ್ ಕಮಾನ್’ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದೆ. ಸದ್ಯ ಈ ಕಟ್ಟಡದ ಹೆಸರೀಗ ತೀನ್ ಕಮಾನ್ ಎಂಬುದಾಗಿ ಯುವಕರ ಬಾಯಿಯಲ್ಲಿ ಸಲೀಸಾಗಿ ಓಡಾಡುತ್ತಿದೆ.
ಪ್ರಸ್ತುತ ಶಹಾಪುರದ ನೂತನ ತಹಸೀಲ್ ಕಚೇರಿ, ಮಿನಿ ವಿಧಾನಸೌಧದ ಬದಲು ‘ತೀನ್ ಕಮಾನ್’ ಎಂದೇ ಪ್ರಸಿದ್ಧವಾಗುತ್ತಿದೆ. ಕಟ್ಟಟಡದ ಮುಂಭಾಗ ಮೂರು ಕಮಾನ್ಗಳು ಮಾತ್ರ ಎದ್ದು ಕಾಣುತ್ತಿರುವುದರಿಂದ ಇದಕ್ಕೆ ಯಾರೋ ಒಬ್ಬರು ಮಿನಿ ವಿಧಾನಸೌಧ ಅನ್ನುವುದುಂಟಾ..ಛೇ..ಛೇ..ಆಗದು..ಆಗದು ಎಂದು ಹೊಸ ಹೆಸರು ಕರೆದಿದ್ದಾರೆ.
ಅದೇ ತೀನ್ ಕಮಾನ್ ಎಂದು. ಅಂದಿನಿಂದ ಪ್ರಸ್ತುತ ನಗರದೆಲ್ಲೆಡೆ ತೀನ್ ಕಮಾನ್ ಎಂದು ಪ್ರಚಲಿತಗೊಂಡಿದೆ. ಹೀಗಾಗಿ ಈ ಹೆಸರು ನಗರದಲ್ಲಿ ತುಂಬಾ ವೈರಲ್ ಆಗಿದೆ. ನಗರದೆಲ್ಲಡೆ ಎಲ್ಲರೂ ತೀನ್ ಕಮಾನ್ ಹತ್ತಿರ ಇದ್ದೇನೆ. ಸ್ವಲ್ಪ ಕೆಲಸವಿತ್ತು ಬಂದಿದ್ದೆ ಎಂದು ಮಾತಾಡುವುದು ಸಾಮಾನ್ಯವಾಗಿ ಬಿಟ್ಟಿದೆ.
ಕಟ್ಟಡ ಮಾದರಿಗೆ ತಕ್ಕಂತೆ ಹೆಸರು..!
ಕಟ್ಟಡದ ನೋಟ ನೋಡಿಯೇ ಯಾರೋ ಪುಣ್ಯಾತ್ಮ ತೀನ್ ಕಮಾನ್ ಎಂದು ಕರೆದಿದ್ದಾರೆ. ನಿಜವಾಗಲೂ ಈ ಕಟ್ಟಡವನ್ನು ಮಿನಿ ವಿಧಾನಸೌಧ ಎಂದು ಯಾರು ಕರೆಯುತ್ತಾರೆ. ಆ ಮಾದರಿಯಲ್ಲಿ ಇಲ್ಲ ಅದು. ಹೀಗಾಗಿ ಇದಕ್ಕೆ ತೀನ್ ಕಮಾನ್ ವೆಂದು ಹೆಸರು ಬಿದ್ದಿದೆ.
–ಗುರು ಅಂಗಡಿ ಹೊಸೂರ.
Correct title sir.
Thank u sir..
ಸೂಪರ್
ಧನ್ಯವಾದಗಳು..
The Story is quite interesting.The title too is good.History of talluk is etarnalised.You can construct one more building to locate other offices
ಧನ್ಯವಾದಗಳು..