ಪ್ರಮುಖ ಸುದ್ದಿ

ಪಾವಗಡ ಮಂಜಗೆ ಲವ್ ಯೂ ಎಂದ‌ ಬಿಗ್ ಬಾಸ್..

ಪಾವಗಡ ಮಂಜಗೆ ಲವ್ ಯೂ ಎಂದ‌ ಬಿಗ್ ಬಾಸ್..

ವಿವಿ ಡೆಸ್ಕ್ಃ ಬಿಗ್ ಬಾಸ್ ಪ್ರಸ್ತುತ ಸೀಜನ್ ಕೊರೊನಾ ಮಹಾಮಾರಿ ಎಫೆಕ್ಟ್ ನಿಂದ ಕೆಲ‌ದಿನಗಳು ಸ್ಥಗಿತಗೊಳಿಸಲಾಗಿತ್ತು.

ಕೊರೊನಾ ಹಾವಳಿ ಕಡಿಮೆಯಾಗಿ ಲಾಕ್ ಡೌನ್ ಓಪನ್ ಮಾಡಿದ ತಕ್ಷಣ ಮತ್ತೆ ಬಿಗ್ ಬಾಸ್ ಸ್ಪರ್ಧೆ ಆರಂಭಿಸಲಾಗಿತ್ತು.
ಅಂತೂ ಇಂದು ಬಿಗ್ ಬಾಸ್ ಫೈನಲ್ ಕ್ಷಣಗಣನೆಯಲ್ಲಿದೆ.

ಇನ್ನೇನು ಫೈನಲ್ ನಲ್ಲಿ ಪಾವಗಡ ಮಂಜ ಮತ್ತು ಅರವಿಂದ ಕೆಪಿ ಇದ್ದು, ಇಬ್ಬರ ಮಧ್ಯ ಬಿಗ್ ಫೈಟ್ ನಡೆದಿರುವದು ಕಂಡು ಬರುತ್ತಿದೆ. ಅಳೆದು ತೂಗಿ ಪ್ರೇಕ್ಷಕರ ಮತಗಳು ಕೌಂಟ್ ಮಾಡಿ ಅಂತಿಮವಾಗಿ ಬಿಗ್ ಬಾಸ್ ಅಭಿನಯ‌ ಚಕ್ರವರ್ತಿ ಅಂತಿಮ ವಿಜಯಿ ಯಾರೆಂದು ಘೋಷಣೆ ಮಾಡಲಿದ್ದಾರೆ.

ಹೀಗಾಗಿ ಪ್ರೇಕ್ಷಕರು ತಮ್ಮ ಮನದಲ್ಲಿ ಪಾವಗಡ ಮಂಜನೇ ವಿನ್ನರ್ ಎಂದು ಅಂದ್ಕೊಂಡಿದ್ದು, ಪ್ರೋಗ್ರಾಂ ನೋಡ್ತಾ ಇದ್ದಾರೆ.‌

ಇದೊಂದು ಮನೋರಂಜನಾತ್ಮಕ ಕಾರ್ಯಕ್ರಮವಾಗಿದ್ದು, ಭಾಗವಹಿಸಿದ ಎಲ್ಲರೂ ಊಹೆಯೂ ಮಂಜನೆ ಗೆಲ್ತಾರೆ ಎಂಬುದು ನೋಡಿದರೆ ಕೊನೆಯಲ್ಲಿ ಅರವಿಂದ್ ಮುಂಚೂಣಿಯಲ್ಲೂ ಬಂದರೂ ಅಚ್ಚರಿ ಪಡುವಂತಿಲ್ಲ.

ಬಟ್ ವೀಕ್ಷಕರ ಆಸೆ, ಅಭಿಲಾಸೆಯಂತೆ ಪಾವಗಡ ಮಂಜ ವಿನ್ನರ್ ಆಗಲಿದ್ದಾನೆ. ಯಾವುದಕ್ಕೂ ಒಂದಿಷ್ಟೇ ಇಷ್ಟು ಕಾಯಿರಿ ಬಿಗ್ ವೀಕ್ಷಿಸಿ. ವಿವಿ ಬಳಗ ಅನಿಸಿಕೆ ಪ್ರಕಾರ ಮಂಜನಿಗೆ ಬಿಗ್ ಬಾಸ್ ಐ ಲವ್ ಯೂ ಹೇಳಲಿದ್ದಾನೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button