ಕೊರೊನಾ ಹೆಚ್ಚಳ, 4 ನೇ ಅಲೆ ಶುರು, ಬೆಂಗಳೂರಿನಲ್ಲಿ ಭೀತಿ, ಮಾಸ್ಕ್ ಕಡ್ಡಾಯ ಸೂಚನೆ
ಕೊರೊನಾ ಪಾಸಿಟಿವಿಟಿ ದರ ಹೆಚ್ಚಳ, 4 ನೇ ಅಲೆ ಭೀತಿ ಶುರು
ಕೊರೊನಾ ಹೆಚ್ಚಳ, 4 ನೇ ಅಲೆ ಶುರು, ಬೆಂಗಳೂರಿನಲ್ಲಿ ಭೀತಿ, ಮಾಸ್ಕ್ ಕಡ್ಡಾಯ ಸೂಚನೆ
ಬೆಂಗಳೂರಿನಿಂದಲೇ 4 ನೇ ಅಲೆ ಆರಂಭ ಭೀತಿ
ಬೆಂಗಳೂರಃ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. 4 ನೇ ಅಲೆ ಆರಂಭದ ಸಂಭಾವ್ಯ ಹೆಚ್ಚಾಗುತ್ತಿದ್ದಂತೆ, ರಾಜ್ಯ ಸರ್ಕಾರ ಮತ್ತೆ ಮಾಸ್ಕ್ ಕಡ್ಡಾಯ ಮಾಡಿದ್ದು, ಕೊರೊನಾ ನಿಯಮಾವಳಿ ಮಾರ್ಗಸೂಚಿ ಚಾಚು ತಪ್ಪದೆ ಪಾಲನೆ ಮಾಡಲು ಸೂಚನೆ ನೀಡಲಾಗಿದೆ.
ಸೋಮವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಕಡ್ಡಾಯಗೊಳಿಸಿದ್ದು, ಸದ್ಯ ದಂಡ ವಿಧಿಸದಿರಲು ನಿರ್ಧರಿಸಲಾಗಿದೆ. ಕೊರೊನಾ ಮಾರ್ಗಸೂಚಿ ಬಿಡುಗಡೆಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಡೆಡ್ಲಿ ಕೊರೊನಾ ಹೆಚ್ಚಳವಾಗಿದ್ದು, ಹಲವು ಕಠಿಣ ಕ್ರಮಕ್ಕೆ ಮುನ್ಸೂಚನೆ ನೀಡಲಾಗಿದೆ.
ಈ ನಾಲ್ಕು ವಾರಗಳು ಎಚ್ಚರಿಕೆ ಅಗತ್ಯವಿದೆ ಎನ್ನಲಾಗಿದ್ದು, ಜನರು ಜಾಗೃತರಾಗಿ ನಿಯಮವಳಿ ಪಾಲಿಸಬೇಕೆಂದು ತಿಳಿಸಿದೆ. ಇಲ್ಲವಾದಲ್ಲಿ ಗಂಭೀರ ಸ್ಥಿತಿ ಎದುರಿಸಬೇಕಾಗಲಿದೆ. ಕಾರಣ ಏ.15 ರಂದು ಕೊರೊನಾ ಪಾಸಿಟಿವಿಟಿ ದರ ಶೇ.0.70 ರಷ್ಟಿದ್ದು, ಏ. 25 ರವರೆಗೆ ಇದು ಶೇ.1.38 ತಲುಪಿದೆ. ಹೀಗಾಗಿ ತಜ್ಞರು ಮುಂದಿನ ನಾಲ್ಕು ವಾರದಲ್ಲಿ ಇದು ತೀವ್ರತೆ ಪಡೆದುಕೊಳ್ಳುವ ನಿರೀಕ್ಷೆ ಇದ್ದು, ಈಗಲೆ ಇದನ್ನು ತಡೆಯುವ ಕ್ರಮಕ್ಕೆ ಮುಂದಾಗಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅದರಲ್ಲೂ ಬೆಂಗಳೂರಿಗರಿಗೆ ಇದೆ ಎಚ್ಚರಿಕೆ ಗಂಟೆ ಎನ್ನಲಾಗಿದೆ. ಕೊರೊನಾ ನಿಯಮಾವಳಿ ಪಾಲಿಸದಿದ್ದರೆ, ಕಠಿಣ ಪರಿಸ್ಥಿತಿ ಎದುರಿಸುವ ಸಮಯ ದೂರವಿಲ್ಲ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಪಾಸಿಟಿವಿಟಿ ಜಾಸ್ತಿಯಾಗುತ್ತಿದ್ದಂತೆ ಕೊರೊನಾ ಪ್ರಕರಣಗಳು ಇಲ್ಲಿಂದಲೇ ರಾಜ್ಯಾದ್ಯಂತ ಹರಡುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮ ಅಗತ್ಯವಿದೆ.
5000 ಪ್ರಕರಣಗಳು ಕಂಡು ಬಂದಲ್ಲಿ ಟಫ್ ರೂಲ್ಸ್ ಜಾರಿ ಇದರಿಂದ ಬೇರೆ ಜಿಲ್ಲೆಗಳಿಗೂ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಬೇಜವಬ್ದಾರಿ ವರ್ತಿಸದೆ ಈಗಲೇ ಎಚ್ಚೆತ್ತು ನಿಯಮ ಪಾಲನೆ ಮಾಡಿದ್ದಲ್ಲಿ ಒಳಿತು ಎನ್ನಲಾಗಿದೆ.