ಕಣ್ಣೆದುರಿಗೆ ಕಳ್ಳಸಾಗಣೆ ಕಳ್ಳನ ಕೈಚಳಕ ಇದನ್ನೋದಿ
ಕಳ್ಳ ಸಾಗಣೆ
ಮುಲ್ಲಾ ದಿನಾಲೂ ಒಂದು ಕತ್ತೆಯ ಮೇಲೆ ದೊಡ್ಡದೊಂದು ಹುಲ್ಲಿನ ಹೊರೆ ಇಟ್ಟುಕೊಂಡು ತನ್ನ ದೇಶದ ಗಡಿ ದಾಟುತ್ತಿದ್ದ, ಗಡಿ ಕಾಯುವ ಅಧಿಕಾರಿಗಳಿಗೆ ಸಂಶಯ ಬಂತು. ಹೀಗಾಗಿ ಪ್ರತಿಬಾರಿ ಅವನು ದಾಟುವಾಗಲೂ ಹುಲ್ಲಿನ ಹೊರೆಯನ್ನೆಲ್ಲ ಚೆನ್ನಾಗಿ ಪರಿಶೀಲಿಸುತ್ತಿದ್ದರು.
ಆದರೂ ಅಧಿಕಾರಿಗಳ ಅನುಮಾನ ಹೋಗಲೇ ಇಲ್ಲ. ಎಷ್ಟೋ ಬಾರಿ ಆ ಹುಲ್ಲು ಹೊರೆಗೆ ಬೆಂಕಿಯನ್ನೂ ಕೊಡುತ್ತಿದ್ದರು. ಆದರೂ ಮುಲ್ಲಾ ದಿನೇ ದಿನೇ ಶ್ರೀಮಂತನಾಗುತ್ತಲೇ ಇದ್ದ.
ಈ ಅಧಿಕಾರಿಗಳ ಪೈಕಿ ಒಬ್ಬ ನಿವೃತ್ತನಾದ. ಅದೇ ಸಮಯಕ್ಕೆ ಮುಲ್ಲಾನೂ ಈ ದಂಧೆ ಬಿಟ್ಟ. ಅದಾದ ನಂತರ ಒಮ್ಮೆ ಅವರಿಬ್ಬರೂ ಭೇಟಿಯಾದಾಗ ಆ ಅಧಿಕಾರಿ ತನ್ನ ಸಂಶಯವನ್ನು ಬಾಯ್ದಿಟ್ಟು ಕೇಳಿದ ‘ಅಲ್ಲಯ್ಯಾ, ಪ್ರತಿ ದಿನ ನೀನು ಏನನ್ನು ಕಳ್ಳ ಸಾಗಣಿಕೆ ಮಾಡುತ್ತಿದ್ದೆ? ನಾನೋ ಸಾಕಷ್ಟು ಪರೀಕ್ಷಿಸಿದ್ದೆ, ಪರಿಶೀಲಿಸಿದ್ದೆ. ಆದರೂ ಸೋತಿದ್ದೆ
ನಗುತ್ತಲೇ ಮುಲ್ಲಾ ಹೇಳಿದ ‘ನಾನು ಸಾಗಿಸಿದ್ದು ಹುಲ್ಲನ್ನಲ್ಲ. ಹುಲ್ಲಿನೊಳಗೆ ಏನನ್ನೂ ಬಚ್ಚಿಡಲಿಲ್ಲ. ನಾನು ಕಳ್ಳಸಾಗಣೆ ಮಾಡಿ ಗೆದ್ದದ್ದು ಕತ್ತೆಗಳನ್ನೇ, ಪ್ರತಿ ಬಾರಿಯೂ ಒಂದೊಂದು ಕತ್ತೆ ಮೇಲೆ ರೂ. ಹತ್ತು ಸಾವಿರ ಲಾಭ ಸಿಗುತ್ತಿತ್ತೆನೆಗೆ..!’
ನೀತಿ :– ಸಂಶಯ ಬಂದಾಗ ಹುಲ್ಲು ಪರಿಶೀಲಿಸುವುದಲ್ಲ. ವ್ಯಕ್ತಿ ಮಾಡುವ ಕೆಲಸ. ಸಂಶಯ ಪ್ರವೃತ್ತಿಗೆ ಮದ್ದು ಸೌಹಾರ್ದತೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.