ಕಥೆ

‘ಬೆಳೆಯುವ ಪೈರು ಮೊಳಕೆಯಲ್ಲಿ’ ಶಾರದಾ ಪೀಠದ ಭಾರತಿ ಸ್ವಾಮೀಜಿಯ ಬಾಲ್ಯದ ಸಂಗತಿ ಓದಿ

ಶೃಂಗೇರಿ ಶಾರದಾ ಪೀಠದ 34 ನೇ ಜಗದ್ಗುರುಗಳ ಬಾಲ್ಯದ ಒಂದು ಸಂಗತಿ

 

ಬೆಳೆಯುವ ಪೈರು ಮೊಳಕೆಯಲ್ಲಿ

ಶೃಂಗೇರಿಯ ಶಾರದಾ ಪೀಠದಲ್ಲಿ ೩೪ನೇ ಜಗದ್ಗುರುಗಳಾಗಿದ್ದವರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು (೧೮೯೨-೧೯೫೪). ಇವರ ಅವಧೂತತನವಂತೂ ಇಂದಿಗೂ ಜನಜನಿತವಾಗಿದೆ.

ಸನ್ಯಾಸವನ್ನು ತೆಗೆದುಕೊಳ್ಳುವ ಮೊದಲು, ಸ್ವಾಮಿಗಳ ಹೆಸರು ನರಸಿಂಹಶಾಸ್ತ್ರಿ

ನರಸಿಂಹ ಇನ್ನೂ ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆ. ತರ್ಕಶಾಸ್ತ್ರದ ಪರೀಕ್ಷೆ ನಡೆಯುತ್ತಿತ್ತು. ಪಠ್ಯದಲ್ಲಿ ಇಲ್ಲದ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು ತರ್ಕಶಾಸ್ತ್ರದ ಅಧ್ಯಾಪಕರಿಗೆ ನರಸಿಂಹಶಾಸ್ತ್ರಿಯ ಬಗ್ಗೆ ತುಂಬ ಪ್ರೀತಿ, ಪರೀಕ್ಷೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಆ ಅಧ್ಯಾಪಕರು, ಪರೀಕ್ಷೆಯ ನಿಯಮವನ್ನೂ ಮೀರಿ, ನರಸಿಂಹಶಾಸ್ತ್ರಿಗೆ ಗುಟ್ಟಾಗಿ ಉತ್ತರವನ್ನು ಹೇಳಿದರು.

ಪರೀಕ್ಷೆಯು ಮುಗಿದ ಮೇಲೆ ಅಧ್ಯಾಪಕರು ಉತ್ತರ ಪತ್ರಿಕೆಯನ್ನು ನೋಡುತ್ತಾರೆ. ನರಸಿಂಹಶಾಸ್ತ್ರಿ ಆ ಪ್ರಶ್ನೆಗೆ ಉತ್ತರವನ್ನೇ ಬರೆದಿಲ್ಲ! ‘ಅರೆ! ಉತ್ತರವನ್ನು ಹೇಳಿಕೊಟ್ಟರೂ ಬರೆದಿಲ್ಲವಲ್ಲ ಎಂದು ಆಶ್ಚರ್ಯವಾಯಿತು.

ಅಧ್ಯಾಪಕರು ನರಸಿಂಹ ಶಾಸ್ತ್ರಿಯನ್ನು ಹತ್ತಿರ ಕರೆದು, “ನಾನು ಉತ್ತರವನ್ನು ಹೇಳಿದರೂ ನೀನು ಯಾಕೆ ಬರೆಯಲಿಲ್ಲ” ಎಂದು ಕೇಳಿದರು. ಅದಕ್ಕೆ ನರಸಿಂಹಶಾಸ್ತ್ರಿ ಕೊಟ್ಟ ಉತ್ತರ “ಸ್ವಾಮಿ! ನನಗೆ ಆ ಪ್ರಶ್ನೆಗೆ ಉತ್ತರ ತಿಳಿದಿರಲಿಲ್ಲವಾದ್ದರಿಂದ ನಾನು ಬರೆಯಲಿಲ್ಲ. ನೀವು ತಿಳಿಸಿದ ಉತ್ತರವನ್ನು ಬರೆದಿದ್ದರೆ ಅದು ನನ್ನ ಉತ್ತರವಾಗುತ್ತಿರಲಿಲ್ಲ, ನಿಮ್ಮ ಉತ್ತರವಾಗುತ್ತಿತ್ತಷ್ಟೇ!”

ಶಿಷ್ಯನ ಉತ್ತರದಿಂದ ಅಧ್ಯಾಪಕರಿಗೆ ಸಹಜವಾಗಿಯೇ ಸಂತೋಷ ವಾಗಿರಬೇಕು. ನಮ್ಮಲ್ಲಿ ಒಂದು ಮಾತು ಉಂಟಲ್ಲವೆ, ಬೆಳೆಯುವ ಪೈರು ಮೊಳಕೆಯಲ್ಲೇ ಗೊತ್ತಾಗುತ್ತದೆ’ ಎಂದು. ಜೀವನದಲ್ಲಿ ಎತ್ತರಕ್ಕೆ ಏರಿದವರ, ಮಹಾಪುರುಷರ ಜೀವನಪಥವನ್ನು ನೋಡಿದಾಗ ಅವರ ಮುಂದಿನ ಸಾಧನೆಯ ಕುರುಹುಗಳು ಜೀವನದ ಸಣ್ಣ ಸಣ್ಣ ಸಂಗತಿಗಳಲ್ಲೂ ಪ್ರಕಟವಾಗಿರುತ್ತವೆ.

ಯಾವುದೇ ಕ್ಷೇತ್ರದ ಸಿದ್ಧಿಯೂ ಕೂಡಾ ಒಂದೇ ದಿನದಲ್ಲಿ ಲಭಿಸುವಂಥದ್ದಲ್ಲ. ಅದಕ್ಕೆ ನಿರಂತರ ಕೃಷಿಯನ್ನು ಮಾಡಬೇಕಾಗುತ್ತದೆ. ನಾವು ಗುರಿ ತಲುಪಲು ನಮ್ಮ ಒಂದೊಂದು ಹೆಜ್ಜೆಯೂ ಸಹ ಮುಖ್ಯವಾಗುತ್ತದೆ. ಹೀಗಾಗದಿದ್ದಾಗ ನಮ್ಮ ಪರಿಸ್ಥಿತಿ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ?” ಎಂಬಂತಾಗುತ್ತದೆ, ಅಷ್ಟೇ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button