ಶ್ರದ್ಧೆ
ಚಿಕ್ಕವರಾದರೇನು ದೊಡ್ಡವರಾದರೇನು ಶ್ರದ್ದೆ ಉಳ್ಳವರು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು, ಶ್ರದ್ಧೆಯಿಲ್ಲದವರು ಎಂಥವರಿದ್ದರೂ ಏನನ್ನೂ ಸಾಧಿಸಲಾರರು. ಸಿದ್ಧಿಯ ಶ್ರೀಗಿರಿಯತ್ತ ನಮ್ಮನ್ನು ಕೈಹಿಡಿದು ಮುನ್ನಡೆಸುವುದೇ
ಒಂದು ಭದ್ರವಾದ ಕೋಟೆಯ ಗೋಡೆ ಇತ್ತು. ಅದರಲ್ಲಿ ಆಲದ ಮರದ ಒಂದು ಚಿಕ್ಕ ಬೀಜ ಬಂದು ಬಿದ್ದಿತು. ಕೋಟೆ ಗೋಡೆಯು ದರ್ಪದಿಂದ ಕೇಳಿತು. ಇಲ್ಲಿ ಮಣ್ಣಿಲ್ಲ, ನೀರಿಲ್ಲ ನೀನು ಹೇಗೆ ಬೆಳೆಯುತ್ತಿ? “ನೋಡುತ್ತಿರು ನಾನು ಹೇಗೆ ಬೆಳೆಯುತ್ತೇನೆ” ಎಂದಿತು ಬೀಜ.
ಅಷ್ಟರಲ್ಲಿ ಮಳೆ ಬಿದ್ದಿತು. ಅಷ್ಟು ಹಸಿ ಸಾಕಾಗಿತ್ತು. ಅದು ಬೇರು ಬಿಟ್ಟಿತು. ಬಿಗಿ ಹಿಡಿಯಿತು. ನಿಧಾನವಾಗಿ ಗಾಳಿ ಧೂಳ ಬಳಸಿಕೊಂಡು ಮೊಳಕೆಯೊಡೆಯಿತು. ದಿನಗಳು ಉರುಳಿದವು. ಋತುಗಳು ಸರಿದವು. ಬೇರು ಬಲಿಷ್ಠವಾಯಿತು. ಕೋಟೆಗೋಡೆ ಸಡಿಲಾಯಿತು. ಚಿಕ್ಕ ಬೀಜದ ಶ್ರದ್ಧೆಗೆ ಭದ್ರವಾದ ಕೋಟೆಗೋಡೆಯು ನಡುಗಿ ಹೋಯಿತ್ತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.