ದುರಾಸೆಯಿಂದ ಸೇವೆ ಮಾಡದಿರಿ.! ಎಲ್ಲಾ ದಂಪತಿಗಳು ಓದಲೇ ಬೇಕಾದ ಕಥೆ
ಸೇವೆಗೆ ಫಲ ಹಣವಲ್ಲ ಗುಣ
ಸೇವೆಗೆ ತಕ್ಕ ಫಲ
ಒಬ್ಬ ವೃದ್ಧ ರೈತನಿದ್ದ. ಅವನೊಬ್ಬನೇ ಮಗನಿದ್ದ. ಮುದ್ದು ಮಗನಿಗೆ ಮದುವೆ ಮಾಡಿಸಿದ. ಬಂದ ಸೊಸೆ ಮುದುಕನನ್ನು ನಿಕೃಷ್ಟವಾಗಿ ಕಾಣುತ್ತಿದ್ದಳು. ಮೊದಮೊದಲು ಈ ಮಗ ತನ್ನ ಹೆಂಡತಿಗೆ ಬುದ್ದಿ ಹೇಳುತ್ತಿದ್ದ. ಆದರೆ ಅವಳ ವಯ್ಯಾರದ ಮುಂದೆ ಆನಂತರ ಕರಗಿಯೇ ಹೋದ. ಕ್ರಮೇಣ ಇಬ್ಬರೂ ಮುದುಕನನ್ನು ಅಪರಿಚಿತರಂತೆ ಕಾಣಲಾರಂಭಿಸಿದರು.
ಪಾಪ ಮುದುಕ ರೈತನಿಗೆ ಕೆಲವೊಮ್ಮೆ ಒಣರೊಟ್ಟಿ ತುಂಡು ಸಿಗುತ್ತಿತ್ತು. ಅದನ್ನೇ ತಿಂದು ನೆಮ್ಮದಿಯಿಂದ ಇರುತ್ತಿದ್ದ. ಆದರೆ ಈ ವ್ಯವಹಾರದಿಂದ ಮುದುಕ ನೊಂದಾಗ ಅವರಿಗೆ ಪಾಠ ಕಲಿಸಲು ಮುಂದಾದ. ಅದಕ್ಕಾಗಿ ಮನಸ್ಸಿನಲ್ಲಿಯೇ ಉಪಾಯ ಮಾಡಿ. ಅರ್ಧರಾತ್ರಿಯಲ್ಲಿ ತನ್ನ ಕೋಣೆಯಲ್ಲಿ ಕುಳಿತು ದುಡ್ಡಿನ ಶಬ್ದ ಮಾಡಲಾರಂಭಿಸಿದ.
ಒಂದು ರಾತ್ರಿ ಸೊಸೆಗೆ ಎಚ್ಚರವಾಯಿತು. ಮಾವನ ಕೋಣೆಯ ಬಾಗಿಲ ಬಳಿ ಕಿವಿಗೊಟ್ಟು ಆಲಿಸಿ, ತನ್ನ ಗಂಡನಿಗೂ ತಿಳಿಸಿದಳು ಅಂದಿನಿಂದ ಇಬ್ಬರೂ ಮುದುಕನ ಸೇವೆಯನ್ನು ಮನಸ್ಸಿಟ್ಟು ಮಾಡಲು ತೊಡಗಿದರು. ಮುದುಕನಿಗೆ ತನ್ನ ಉಪಾಯ ಫಲಿಸಿತೆಂದು ನೆಮ್ಮದಿಯಾಯಿತು.
ಆಕಸ್ಮಾತ್ತಾಗಿ ಮುದುಕ ಒಂದು ದಿನ ತೀರಿದ. ಮಗ-ಸೊಸೆ ಮೊಸಳೆ ಕಣ್ಣೀರು ಹಾಕಿದರು. ರಾತ್ರಿ ಮುದುಕನಿಗೆ ಕೋಣೆಗೆ ಬಂದರು. ಅವನ ಕಬ್ಬಿಣದ ಪೆಟ್ಟಿಗೆ ಮೇಲ್ಭಾಗದಲ್ಲಿ “ಮೊದಲು ಈ ಪತ್ರ ಬಿಚ್ಚಿ ಓದುವುದು” ಎಂದಿತ್ತು. ಗಂಡ ಪತ್ರ ಓದಿದ. “ಒಂದು ವೇಳೆ ನೀವು ಸೇವೆಯನ್ನು ದುರಾಸೆಯಿಂದ ಮಾಡಿದ್ದರೆ ಹಣವೆಲ್ಲ ಕಬ್ಬಿನ ಮತ್ತು ಕಲ್ಲಾಗುತ್ತದೆ” ಎಂದು ಬರೆದಿತ್ತು.
ಮುಚ್ಚಿದ ಬಟ್ಟೆ ಸರಿಸಿದ. ಪೆಟ್ಟಿಗೆ ತುಂಬಾ ಕಲ್ಲು ಹಾಗೂ ಕಬ್ಬಿಣದ ಚೂರುಗಳಿದ್ದವು ಹೆಂಡತಿ ಗಂಡನನ್ನು ಬೈಯ್ಯಲಾರಂಬಿಸಿದಳು. ಆಗ ಗಂಡ “ನಮ್ಮ ದುರಾಸೆಗೆ ತಕ್ಕ ಫಲದಿಂದ ಹೀಗಾಗಿತ್ತು” ಎಂದು ಹೆಂಡತಿಗೆ ತಿಳಿವಳಿಕೆ ನೀಡಿದ. ಇಬ್ಬರು ಪಶ್ಚಾತ್ತಾಪದಿಂದ ನೊಂದುಕೊಂಡರು.
ನೀತಿ :– ಸೇವೆಯ ಫಲವೆಂದರೆ ಹಣವಲ್ಲ ಗುಣ. ಇದರಿಂದ ಬಾಳು ಬೆಳಕಾಗುವುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.