ಪ್ರಮುಖ ಸುದ್ದಿ

ಶಹಾಪುರಃ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಭಿತ್ತಿ ಪತ್ರ ಬಿಡುಗಡೆ

2 ದಿನ ಅದ್ದೂರಿ ಕಾರ್ಯಕ್ರಮ, ಅ. 15, 16 ವಿವಿಧ ಧಾರ್ಮಿಕ ಕಾರ್ಯಕ್ರಮ

ದ್ವಾದಶ ಪಟ್ಟಾಧಿಕಾರ ಮಹೋತ್ಸವ ಸಿದ್ಧತೆ ಆರಂಭ

2 ದಿನ ಅದ್ದೂರಿ ಕಾರ್ಯಕ್ರಮ, ಅ. 15, 16 ವಿವಿಧ ಧಾರ್ಮಿಕ ಕಾರ್ಯಕ್ರಮ

yadgiri, ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಶ್ರೀ ಶಾಂಭವಿ ಮಾತಾ ಚಿಕ್ಕಮಠಕ್ಕೆ ಪೀಠಾಧಿಪತಿಯಾಗಿ ಪಟ್ಟಾಧಿಕಾರ ಸ್ವೀಕಾರ ಮಾಡಿ 12 ವರ್ಷಗಳು ಕಳೆದಿರುವ ಹಿನ್ನೆಲೆ ಶ್ರೀ ರಂಭಾಪುರಿ ಜಗದ್ಗುರುಗಳ ಅಪ್ಪಣೆಯಂತೆ ಭಕ್ತರ ಅಭಿಲಾಷೆಯಂತೆ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಆಯೋಜಿಸಲಾಗಿದ್ದು, ಆ ಕುರಿತು ಪೂರ್ವ ಪ್ರಕಟಣೆಯನ್ನು ಚಿಕ್ಕಮಠದ ಪೀಠಾಧಿಪತಿ ಶ್ರೀ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಬಿಡುಗಡೆಗೊಳಿಸಿದರು.

ಗ್ರಾಮದ ಶ್ರೀ ಶಾಂಭವಿ ಮಾತಾ ಚಿಕ್ಕಮಠದಲ್ಲಿ ಮಹಾನವಮಿ ಹಬ್ಬದ ಸಂದರ್ಬದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರರ ಅಪ್ಪಣೆಯಂತೆ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಜರುಗಲಿದೆ. ಶ್ರೀ ಶಾಂಭವಿ ಮಾತಾ ಚಿಕ್ಕಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಲಿಂಗೈಕ್ಯರಾದ ಮೇಲೆ ಮಠಕ್ಕೆ ಪೀಠಾಧಿಪತಿಗಳು ಇರಲಿಲ್ಲ. ಆಗ ಗ್ರಾಮದ ಮುಖಂಡರು ಜಗದ್ಗುರುಗಳಿಗೆ ಕೇಳಿಕೊಂಡಾಗ ಕಳೆದ 2009 ಏಪ್ರೀಲ್ 30 ರಂದು ಚಿಕ್ಕಮಠದ ಪೀಠಾಧಿಪತಿಗಳಾಗಿ ಶ್ರೀ ಶಿವಲಿಂಗರಾಜೇಂದ್ರ ಶಿವಾಚಾರ್ಯರನ್ನ ಪಟ್ಟಾಧಿಕಾರ ಕೂಡಿಸಿ ಜವಬ್ದಾರಿ ವಹಿಸಲಾಗಿತ್ತು.

12 ವರ್ಷಗಳು ಕಳೆದಿರುವ ಹಿನ್ನೆಲ ಶ್ರೀಮದ್ ರಂಭಾಪುರಿ ಜಗದ್ಗುರುಗಳು ದ್ವಾದಶ ಪಟ್ಟಾಧಿಕಾರದ ಕಾರ್ಯಕ್ರಮವನ್ನು ಮಾಡಲು ಸೂಚಿಸಿರುವ ಕಾರಣ ಅಕ್ಟೋಬರ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಅಕ್ಟೋಬರ್ 15 ಮತ್ತು 16 ಎರಡು ದಿನಗಳ ಕಾಲ ಅದ್ದೂರಿಯಾಗಿ ಸಮಸ್ತ ಸಗರನಾಡಿನ ಭಕ್ತರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದ್ದು, ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಜೊತೆಗೆ ಪುರಾಣ ಪ್ರವಚನ, ಅಯ್ಯಾಚಾರ, ಶಿವದೀಕ್ಷೆ, 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕøತೀಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದೆ. ಕಾರ್ಯಕ್ರಮದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ನಾಡಿನ ಹರ-ಗುರು ಚರಮೂರ್ತಿಗಳು, ರಾಜಕೀಯ ಧುರಿಣರು, ಶಾಸಕ, ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜೆಟ್ಟೆಪ್ಪ ಹಿರೇಪೂಜಾರಿ, ಅಬ್ದುಲ್ ಶಹಾಪುರ, ಮಹ್ಮದ್ ಮೊಸಬಾಯಿ, ಷಣ್ಮುಖಪ್ಪ ಕಕ್ಕೇರಿ, ರಾಜಕುಮಾರ ಆಂದೇಲಿ, ಬಸವರಾಜ ಹುಡೇದ್, ಸಂಗಣ್ಣ ಮಲಗೊಂಡ, ಭೀಮರಾಯ ನಂದಿಕೋಲ್, ತಿಪ್ಪಣ್ಣ ಬಿರಾಳ್, ತಿಪ್ಪೋಜಿ ಸುಗಂಧಿ, ನಾಗಪ್ಪ ಕಣೆಕಲ್, ದೊಡ್ಡಪ್ಪ ದೇಸಾಯಿ, ಕಲ್ಲಪ್ಪ ಖಾನಾಪುರ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button