ಪ್ರಮುಖ ಸುದ್ದಿ

ಪಧಾನಿ ಮೋದಿ ಮತ್ತು ಆ ನವಿಲು

ಕೆಲಸದಲ್ಲಿ ಮಗ್ನ ಪ್ರಧಾನಿ ಮುಂದೆ ಸ್ವಚ್ಛಂದವಾಗಿ‌ ವಿಹರಿಸುತ್ತಿರುವ ನವಿಲು

ವಿವಿ ಡೆಸ್ಕ್ಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನೆಯಲ್ಲಿ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದು, ರಾಷ್ಟ್ರಪಕ್ಷಿ ನವಿಲೊಂದು ಸ್ವಚ್ಛಂದವಾಗಿ‌ ವಿಹರಿಸುತ್ತಾ‌ ರಾಷ್ಟ್ರದ ಒಡೆಯ ಏನೋ ಮಹತ್ತರ ವಿಚಾರದಲ್ಲಿ‌ ಮುಳುಗಿ ಬರೆಯುತ್ತಿರುವದನ್ನು ಗಮನಿಸಿ ನವಿಲು ಮೋದಿಜೀಯವರ ಕಾರ್ಯವೈಖರಿಗೆ ಸಲಾಂ ಹೇಳಿದಂತೆ,‌ ಮೆಚ್ಚುಗೆ ವ್ಯಕ್ತಪಡಿಸಿದ ಭಾವ ಬರುವಂತೆ ನವಿಲು‌‌‌ ನವಿರಾಗಿ‌ ಹೆಜ್ಜೆ ಹಾಕುತ್ತಾ‌ ಮೋದಿಯ ಮುಂದೆ‌‌ ಕಣ್ಬಿಟ್ಟು‌ ನೋಡುತ್ತಿರುವ ನವಿಲನ್ನ ಕಂಡ ಕಣ್ಣುಗಳಿಗೆ ಅದೆಷ್ಟು ಆನಂದವೆನಿಸಿತೋ ಗೊತ್ತಿಲ್ಲ.

ಆದರೆ ಆ‌ ವಿಡಿಯೋ ತುಣಕೊಂದು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಸಹಸ್ರರಾರು ಜನರು ರೋಮಾಂಚಿತಾರಗಿದ್ದಾರೆ.
ಕೆಲ ಅವರ ಅಭಿಮಾನಿಗಳು‌ ಮೋದಿ ಪಕ್ಷದ ನಾಯಕರು, ಜನಪ್ರತಿನಿಧಿಗಳು ಅವರದೇ ಆದ ಅನಿಸಿಕೆ‌ಗಳನ್ನು‌ ಟ್ವಿಟರ್, ಫೇಸ್ ಬುಕ್ ನಲ್ಲಿ‌ ಉಲ್ಲೇಖಿಸಿದ್ದಾರೆ.

ಅಲ್ಲದೆ ಮೋದಿಯವರು ಆ ನವಿಲಿಗೆ ಪಾತ್ರೆಯೊಂದರಲ್ಲಿ ಕಾಳುಗಳನ್ನು ತಿನಿಸುತ್ತಿರುವ ಅವರ ಹೃದಯ ವೈಶಾಲತೆ, ಪಕ್ಷಿಗಳ ಮೇಲಿನ ಮಮತೆ ಅಕ್ಕರೆಯನ್ನು ಕಂಡು ಮಂತ್ರಮುಗ್ಧರಾಗಿದ್ದಾರೆ. ಅವರ ಸಹನಾಶೀಲತೆ, ಸೌಜನ್ಯಾಶೀಲ, ಪ್ರೀತಿಯಸಾಕಾರ ಮೂರ್ತಿ,‌ ಸಭ್ಯಸಾಂಪ್ರದಾಯಿಕ ಸುಸಂಸ್ಕಾರತೆ ಆದರ್ಶಪ್ರಾಯವಾಗಿದೆ.

ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ..ಸಮರ್ಥ ನಾಯಕತ್ವವಿದ್ದಾಗ, ಕಷ್ಟಗಳಿಗೆ ಸ್ಪಂಧಿಸುವ ನಾಯಕನಿದ್ದಾಗ ಆ ದೇಶದ ಪ‌್ರಜೆಗಳಷ್ಟೇ ಅಲ್ಲ ಆ‌ ರಾಷ್ಟ್ರದ ಪ್ರಾಣಿಪಕ್ಷಿಗಳೂ ಸಹ ಸ್ವಚ್ಛಂದವಾಗಿ ಸುತ್ತಾಡುತ್ತವೆ. ಎಂದು ಸಚಿವ ಸಿಟಿ ರವಿ ಟ್ವಿಟರ್ ‌ನಲ್ಲಿ ಬರೆದುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button