ಪ್ರಮುಖ ಸುದ್ದಿ
ಗುತ್ತೇದಾರಗೂ ಸಚಿವ ಸ್ಥಾನ ದೊರೆಯಬೇಕು- ಜಾರಕಿಹೊಳಿ
ಮಾಲೀಕಯ್ಯ ಗುತ್ತೇದಾರಗೂ ಸಚಿವ ಸ್ಥಾನ ಸಿಗಬೇಕು, ಮಾರ್ಚ್-ಏಪ್ರೀಲ್ ನಲ್ಲಿ ದೊಡ್ಡಮಟ್ಡದಲ್ಲಿ ಬದಲಾವಣೆ- ಜಾರಕಿಹೊಳಿ
ವಿವಿ ಡೆಸ್ಕ್ಃ ಇನ್ನೂ ನಮ್ಮ ಟೀಂನಲ್ಲಿ 5 ಜನರಿಗೆ ಅಚಿವ ಸ್ಥಾನ ದೊರೆಯಬೇಕಿದೆ. ಮಾಲೀಕಯ್ಯ ಗುತ್ತೇದಾರ ಅವರಿಗೂ ಸಚಿವ ಸ್ಥಾನ ನೀಡಬೇಕು.ಅವರೊಬ್ಬ ಕಲ್ಬುರ್ಗಿ ಭಾಗದ ಅತಿ ಶಕ್ತಿವಂತ ನಾಯಕ, ನನಗಿಂತ ಶಕ್ತಿವಂತ ನಾಯಕರಿದ್ದು, ಅವರಿಗೂ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಬೇಕಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಅಲ್ಲದೆ ಮುಂದಿನ ಮಾರ್ಚ್-ಏಪ್ರಿಲ್ ನಲ್ಲಿ ಬಹುದೊಡ್ಟಮಟ್ಟದಲ್ಲಿ ವಿಸ್ತರಣೆಯಾಗಲಿದ್ದು ಎಲ್ಲರಿಗೂ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.