ಬೆಂಗಳೂರು: ರೆಸ್ಟೋರೆಂಟ್, ಕೆಫೆ ಹೋಗೋ ಹುಡುಗಿಯರೇ ಜೋಕೆ – ನಿಮ್ಮ ಖಾಸಗಿ ವಿಡಿಯೋ ಕೂಡ ರೆಕಾರ್ಡ್ ಆಗಿರಬಹುದು?

ಬೆಂಗಳೂರು: ರೆಸ್ಟೋರೆಂಟ್, ಕೆಫ್ ಪಬ್‌ಗಳಿಗೆ ಹುಡುಗಿರು ಎಂಜಾಯ್ ಮಾಡೋಕೆ, ಊಟ ಮಾಡೋಕೆ, ಪಾರ್ಟಿ ಮಾಡೋಕೆ ಹೋಗ್ತಾರೆ. ಇಲ್ಲಿ ಶೌಚಾಲಯಗಳನ್ನು ಬಳಸೋದು ಸರ್ವೇ ಸಾಮಾನ್ಯ. ಇಂತಹ ಶೌಚಾಲಯದಲ್ಲಿ ಕದ್ದು ಮೊಬೈಲ್ ಇಟ್ಟು ಹುಡುಗಿರ ಖಾಸಗಿ ಕ್ಷಣ ಚಿತ್ರೀಕರಣ ಮಾಡ್ತಾರೆ. ಹೀಗೆ ಮಹಿಳೆಯರ ಶೌಚಾಲಯದ ಕಸದ ಡಬ್ಬಿಯಲ್ಲಿ ಮೊಬೈಲ್ ಪತ್ತೆಯಾಗಿದ್ದು, ಈ ಮೊಬೈಲ್‌ನಲ್ಲಿ 2 ಗಂಟೆಗಳ ವಿಡಿಯೋ ರೆಕಾರ್ಡಿಂಗ್ ಸಿಕ್ಕಿದೆ. ದೊಡ್ಡ ಹೋಟೆಲ್‌ಗಳು ಮತ್ತು ಕೆಫೆಗಳಲ್ಲಿ ವಿಶ್ರಾಂತಿ ಕೊಠಡಿಯನ್ನು ಬಳಸುವ ಮೊದಲು ನೂರು ಬಾರಿ ಯೋಚಿಸಿ. ಏಕೆಂದರೆ ನಿಮ್ಮ ವಿಡಿಯೋ ನಿಮಗೆ ತಿಳಿಯದೆ ರೆಕಾರ್ಡ್ ಆಗಬಹುದು. ಸದ್ಯ ಅಂಥದ್ದೊಂದು ಘಟನೆ ಪ್ರಸಿದ್ಧ ಕಾಫಿ ಶಾಪ್‌ನಲ್ಲಿ ನಡೆದಿದೆ. ಕೆಲ ಕಿಡಿಗೇಡಿಗಳ ಕೃತ್ಯದಿಂದ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಹೋಟೆಲ್, ಕಾಫಿ ಶಾಪ್, ಶಾಪಿಂಗ್ ಮಾಲ್, ಟ್ರಯಲ್ ರೂಮ್‌ನಿಂದ ವಾಶ್‌ರೂಮ್‌ವರೆಗೆ ಹಿಡನ್ ಕ್ಯಾಮೆರಾ ಬಳಸಿ ಮಹಿಳೆಯರ ವಿಡಿಯೋ ತೆಗೆಯುವ ಗ್ಯಾಂಗ್‌ಗಳಿವೆ. ನಗರದ ಬಿಇಎಲ್ ರಸ್ತೆಯಲ್ಲಿರುವ ಪ್ರಸಿದ್ಧ ಥರ್ಡ್ ವೇವ್ ಕಾಫಿ ಕೆಫೆಯ ಲೇಡೀಸ್ ವಾಶ್‌ರೂಮ್‌ನ ಡಸ್ಟ್‌ಬಿನ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಸುಮಾರು 2 ಗಂಟೆಗಳ ಕಾಲ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ದಾಖಲಾಗಿದೆ. ಥರ್ಡ್ ವೇವ್ ಕಾಫಿ ಕೆಫೆಯ ಉದ್ಯೋಗಿಗಳು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ‘ಗ್ಯಾಂಗ್ಸ್ ಆಫ್ ಸಿನಿಪುರ’ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಫೆ ಸಿಬ್ಬಂದಿ ತಮ್ಮ ಅನುಭವ ಹಂಚಿಕೊಂಡಿದ್ದು, ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಬಚ್ಚಿಟ್ಟು ಸುಮಾರು ಎರಡು ಗಂಟೆಗಳ ಕಾಲ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. “ಬೆಂಗಳೂರಿನಲ್ಲಿ ಥರ್ಡ್ ವೇವ್ ಕಾಫಿ ಕೆಫೆಗೆ ಹೋಗಿದ್ದೆ. ಟಾಯ್ಲೆಟ್ ಸೀಟ್ ಎದುರಿನ ಕಸದ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ಪತ್ತೆಯಾಗಿದೆ. ಫೋನ್ ಫ್ಲೈಟ್ ಮೋಡ್‌ನಲ್ಲಿದ್ದುದರಿಂದ ಯಾರೂ ಅದನ್ನು ಗಮನಿಸಿರಲಿಲ್ಲ. ಕಸದ ಬುಟ್ಟಿಗೆ ಸಣ್ಣ ರಂಧ್ರ ಮಾಡಿ, ಫೋನ್ ಇಟ್ಟು ಕ್ಯಾಮೆರಾ ಆನ್ ಮಾಡಲಾಗಿದೆ. ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಫೋನ್ ಇರುವುದು ಕೂಡ ಬೆಳಕಿಗೆ ಬಂದಿದೆ. ತಕ್ಷಣ ಈ ವಿಚಾರವನ್ನ ಮಹಿಳೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರಿಂದ ಮೊಬೈಲ್ ಇಟ್ಟಿದ್ದ ಸಿಬ್ಬಂದಿ ಗುರುಸಿತಿ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಮೂಲದ ಮನೋಜ್, 23 ವರ್ಷ, ಬಂಧಿತ ಆರೋಪಿಯಾಗಿದ್ದು, ಮನೋಜ್ ಕಾಫಿ ಶಾಪ್‌ನಲ್ಲಿ ಕಾಫಿ ಮೇಕರ್ ಆಗಿದ್ದು, ಸದಾಶಿವನಗರ ವಿಚಾರಣೆ ನಡೆಸಿದ್ದಾರೆ. ಇನ್ನೂ ಘಟನೆ ಬಗ್ಗೆ ಕ್ಷಮೆ ಕೇಳಿ, ಸಿಬ್ಬಂದಿಯನ್ನ ಥರ್ಡ್ ವೇವ್ ಕೆಫೆ ವಜಾ ಮಾಡಿದೆ.