ಪ್ರಮುಖ ಸುದ್ದಿ
ಜಿಹ್ವೇಶ್ವರ ನಗರದಲ್ಲಿ ಕಾಮದಹನ- ಬಣ್ಣದೋಕುಳಿ
ಜಿಹ್ವೇಶ್ವರ ನಗರದಲ್ಲಿ ಕಾಮದಹನ- ಬಣ್ಣದೋಕುಳಿ
ಶಹಾಪುರಃ ಹೋಳಿಹಬ್ಬದಂಗವಾಗಿ ಇಲ್ಲಿನ ಜಿಹ್ವೇಶ್ವರ ನಗರದಲ್ಲಿ ಸಾಂಪ್ರದಾಯಿಕವಾಗಿ ಕಾಮದೇವನಿಗೆ ನೈವೇದ್ಯ ಅರ್ಪಿಸಿ ಕೆಟ್ಟ, ಅವಗುಣಗಳನ್ನು ದಹಿಸಿ ಉತ್ತಮ ಲೌಕಿಕ ಜ್ಞಾನ, ಮಾನವೀಯತೆ ನೆಲೆಗಟ್ಟಿನಲ್ಲಿ ನಮ್ಮೆಲ್ಲರ ಬದುಕು ಸಮೃದ್ಧಗೊಳ್ಳಲಿ ಎಂದು ಸಂಕಲ್ಪದೊಂದಿಗೆ ಮಹಿಳೆಯರು, ಮಕ್ಕಳು ಹಿರಿಯರು ಪೂಜೆ ನೆರವೇರಿಸಿದರು.
ಪರಸ್ಪರರು ಬಣ್ಣ ಎರಚಿ ಕೇಕೆ ಹಾಕಿದರು ಸಂತಸಪಟ್ಟರು.
ಯುವ ಸಮೂಹ ಬಣ್ಣದೋಕುಳಿಯಲ್ಲಿಮಿಂದೆದ್ದರು.
ಕಾಮದಹನ ಮಾಡಿ ಅದರಲ್ಲಿ ಹುಳ್ಳಾಗಡ್ಡಿ, ಕಡ್ಲಿ ಬೇಯಿಸಿ ತಿಂದು ಖುಷಿಪಟ್ಟರು. ಮಕ್ಕಳು ಸಕ್ಕರೆ ಸರಗಳನ್ನು ಕೊರಳಲ್ಲಿ ಹಾಕಿಕೊಂಡು ಅವುಗಳನ್ನು ತಿಂದು ಖುಷಿ ಪಟ್ಟ ಕ್ಷಣಗಳು ಕಂಡವು. ನಗರದೆಲ್ಲಡೆ ಕೊರೊನಾ ನಿಯಮಗಳು ಜಾರಿಯಿದ್ದರೂ ಅಲ್ಲಲ್ಲಿ ಯುವ ಸಮೂಹ ಬಣ್ಣದೋಕುಳಿ ಆಟ ಗೋಚರಿಸಿತು.